ನಾಪೋಕ್ಲು, ಜ. ೧೧: ಇಲ್ಲಿಗೆ ಸಮೀಪದ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗದ ವತಿಯಿಂದ ಅಂತರರಾಷ್ಟಿçÃಯ ಗಣಿತ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಶಾಲೆಯ ೫ನೇ ತರಗತಿ ವಿದ್ಯಾರ್ಥಿಗಳಾದ ಯಶಸ್ ಮಂದಣ್ಣ ಕೆ.ಬಿ. ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ, ರಶ್ವಿನ್ ಎಂ.ಎನ್. ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ೪ನೇ ತರಗತಿ ವಿದ್ಯಾರ್ಥಿ ತನ್ಮಯ್ ಬಿ.ಎಂ. ಜಿಲ್ಲಾಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಜಿಶ್ಮಿತಾ ಬಿ.ಜಿ. ರಾಷ್ಟçಮಟ್ಟದಲ್ಲಿ ದ್ವಿತೀಯ ಸ್ಥಾನ, ೮ನೇ ತರಗತಿ ವಿದ್ಯಾರ್ಥಿನಿ ಹಾಸಿನಿ ಸಿ.ವಿ. ರಾಷ್ಟçಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ೯ನೇ ತರಗತಿ ವಿದ್ಯಾರ್ಥಿ ತ್ರಿಶೂಲ್ ತಿಮ್ಮಯ್ಯ ಬಿ.ಹೆಚ್. ರಾಷ್ಟçಮಟ್ಟದಲ್ಲಿ ಐದನೇ ಸ್ಥಾನ, ೮ನೇ ತರಗತಿ ವಿದ್ಯಾರ್ಥಿನಿ ದಕ್ಷ ಎಂ.ಆರ್. ಜಿಲ್ಲಾಮಟ್ಟದಲ್ಲಿ ನಾಲ್ಕನೇ ಸ್ಥಾನ, ೧೦ನೇ ತರಗತಿ ವಿದ್ಯಾರ್ಥಿನಿ ನೀಮ ಎಂ.ಪಿ. ಜಿಲ್ಲಾ ಮಟ್ಟದಲ್ಲಿ ೫ನೇ ಸ್ಥಾನ, ೮ನೇ ತರಗತಿ ವಿದ್ಯಾರ್ಥಿನಿ ಖುಷಿ ಡಿ.ಸಿ. ತಾಲೂಕುಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ಪ್ರೇಕ್ಷ ಪೊನ್ನಮ್ಮ ಕೆ.ಆರ್. ತಾಲೂಕು ಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಡಿಂಪನ ಬಿ.ಜೆ. ಹಾಗೂ ೭ನೇ ತರಗತಿ ವಿದ್ಯಾರ್ಥಿ ದುಶ್ಯಂತ್ ಎಂ.ಎಸ್. ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಹಾಗೂ ೬ನೇ ತರಗತಿ ವಿದ್ಯಾರ್ಥಿ ವರ್ಧನ್ ತಾಲೂಕುಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.