ಮಡಿಕೇರಿ, ಜ. ೧೧: ಭಯೋತ್ಪಾದಕ ನಿಗ್ರಹ ದಳದಲ್ಲಿ (ಸೆಂಟರ್ ಫಾರ್ ಕೌಂಟರ್ ಟೆರರಿಸಂ) ಎಸ್.ಪಿ.ಯಾಗಿರುವ ಬಿಳಿಗೇರಿ ಗ್ರಾಮದವರಾದ ಮಂಡುವAಡ ಕೆ. ಗಣೇಶ್ ಹಾಗೂ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಡುವAಡ ಕನ್ನಿಕಾ ಕಾವೇರಮ್ಮ ಅವರನ್ನು ಇತ್ತೀಚೆಗೆ ಕುಟುಂಬದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಗಣೇಶ್ ಅವರು ಮಂಡುವAಡ ಕಾಮಯ್ಯ ಹಾಗೂ ಶಕುಂತಲಾ ದಂಪತಿಯ ಪುತ್ರ. ಕನ್ನಿಕಾ ಅವರು ಅರಣ್ಯ ಇಲಾಖೆಯ ನಿವೃತ್ತ ಆರ್.ಎಫ್.ಓ. ಸುರೇಶ್ ಚಂಗಪ್ಪ ಹಾಗೂ ಧನುಮತಿ ದಂಪತಿಯ ಪುತ್ರಿ.

ಇತ್ತೀಚೆಗೆ ಕುಟುಂಬದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರುಗಳನ್ನು ಸನ್ಮಾನಿಸಲಾಯಿತು. ಮಂಡುವAಡ ಪಿ. ಮುತ್ತಪ್ಪ ಅವರ ಮುಂದಾಳತ್ವದಲ್ಲಿ ಕುಟುಂಬದ ಸದಸ್ಯರು ಇವರುಗಳನ್ನು ಗೌರವಿಸಿದರು.