ಮಡಿಕೇರಿ, ಜ.೧೨: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಡಿಜಿಟಲ್ ಇ-ಸ್ಟಾಂಪ್ ಮೂಲಕ ಪಾವತಿ ಮಾಡುವಂತಹ ಅಪ್ಲಿಕೇಶನ್ ಅನ್ನು ಹೊಸದಾಗಿ ಪರಿಚಯಿಸಿದೆ.
ಈ ಅಪ್ಲಿಕೇಶನ್ ನ ಬಳಕೆಯು ಇ-ಸ್ಟಾಂಪ್ ನ್ನು ಉತ್ಪಾದಿಸುವಲ್ಲಿ ಸುಧಾರಿತ ಪಾರದರ್ಶಕತೆ, ಅನುಕೂಲತೆ ಹಾಗೂ ದಕ್ಷತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಅನ್ನು ಬಳಸುವುದು ಹಾಗೂ ಡಿಜಿಟಲ್ ಇ-ಸ್ಟಾಂಪ್ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ತಾ. ೧೩ ರಂದು ಸಂಜೆ ೪.೩೦ ಗಂಟೆಗೆ ತಾಲೂಕು ಆಡಳಿತ ಸೌಧ, ನೆಲ ಮಹಡಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡೆದುಕೊಳ್ಳುವಂತೆ ಉಪ ನೋಂದಣಾಧಿಕಾರಿ ಸೌಮ್ಯ ತಿಳಿಸಿದ್ದಾರೆ.