ಮಡಿಕೇರಿ, ಜ. ೧೨; ಟಿವಿ ಖರೀದಿ ವಿಚಾರಕ್ಕೆ ಸಂಬAಧಿಸಿದAತೆ ಗ್ರಾಹಕರಿಗೆ ವಂಚಿಸಿದ ಕಾರಣಕ್ಕಾಗಿ ಇಲ್ಲಿನ ಗ್ರಾಹಕರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ. ಕುಶಾಲನಗರದ ಸಿ.ಹೆಚ್. ಹಮ್ಜಾ ರಾಥರ್ ಎಂಬವರು ರಿಲಯನ್ಸ್ ರೀಟೈಲ್ ಲಿಮಿಟೆಡ್ ಸಂಸ್ಥೆಯಿAದ ೨೦೨೩ರಲ್ಲಿ ಎಲ್‌ಜಿ ಟಿವಿ ಖರೀದಿ ಮಾಡಿದ್ದಾರೆ. ರೂ.೩೮, ೦೧೧ ಬೆಲೆ ನೀಡಿ ಟಿವಿ ಖರೀದಿಸಿದ್ದು, ಟಿವಿಯ ಗುಣಮಟ್ಟ ಚೆನ್ನಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇಲ್ಲದೇ ಇರುವದರಿಂದ ಹಾಗೂ ೧೨ ತಿಂಗಳ ವಾರಂಟಿ ಕೂಡ ಇದ್ದುದರಿಂದ ಬದಲಿ ಟಿವಿ ಒದಗಿಸಿಕೊಡುವಂತೆ ಸಂಸ್ಥೆಗೆ ಮನವಿ ಮಾಡಿದ್ದಾರೆ. ಆದರೆ, ಸಂಸ್ಥೆಯವರು ಕಾರಣಗಳನ್ನು ಹೇಳುತ್ತಾ ಮುಂದಕ್ಕೆ ಹಾಕುತ್ತಾ ಬಂದ ಹಿನ್ನೆಲೆಯಲ್ಲಿ ಗ್ರಾಹಕರು ವೇದಿಕೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿರುವ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಬಾರ ಅಧ್ಯಕ್ಷರಾದ ಡಾ.ಸಿ.ರೇಣುಕಾಂಬ, ಸದಸ್ಯರಾದ ಗೌರಮ್ಮಣ್ಣಿ ಅವರುಗಳು ದೋಷಪೂರಿತ ಟಿವಿಯನ್ನು ಹಿಂಪಡೆದು ಟಿವಿ ಯ ಮೊತ್ತ ೩೮,೦೧೧ , ಹಾಗೂ ಗ್ರಾಹಕರಿಗೆ ಉಂಟಾಗಿರುವ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೧೦ ಸಾವಿರ ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳಿಗಾಗಿ ರೂ.ಹತ್ತು ಸಾವಿರ ಪಾವತಿ ಮಾಡುವಂತೆ ಆದೇಶ ಮಾಡಿದ್ದಾರೆ.