ಕುಶಾಲನಗರ, ಜ. ೧೨: ಸುಂಟಿಕೊಪ್ಪದಿAದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ಕೆಳಭಾಗಕ್ಕೆ ಬಿದ್ದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂರು ಮಂದಿಗೆ ತೀವ್ರ ಗಾಯಗಳು ಉಂಟಾಗಿದ್ದು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಓರ್ವನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಶಾಲನಗರ ಪೊಲೀಸರು ತಿಳಿಸಿದ್ದಾರೆ.
ಸುಂಟಿಕೊಪ್ಪ ಪೆಟ್ರೋಲ್ ಬಂಕ್‌ನ ಕೆಲಸಗಾರರಾದ ಅಕ್ಷಯ್, ಧನುಷ್, ಪುರುಷೋತ್ತಮ ಎಂಬವರು ಮುಂಜಾ ನೆ ೩ ಗಂಟೆಗೆ ಸುಂಟಿಕೊಪ್ಪದಿAದ ಕುಶಾಲನಗರ ಕಡೆಗೆ ಮಾರುತಿ ಎಸ್ಟೀಮ್ (ಕೆಎ೦೩Z೬೪೭೭) ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಯಾಗಿ ಕಾರು ಪಲ್ಟಿ ಹೊಡೆದಿದೆ. ಈ ಸಂದರ್ಭ ಮೂವರು ಮಂದಿಗೆ ತೀವ್ರ ಗಾಯಗಳಾಗಿದ್ದು, ದಾರಿಯಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಮಡಿಕೇರಿ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ. ಈ ಸಂಬAಧ ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.