*ಗೋಣಿಕೊಪ್ಪ, ಜ. ೧೨: ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಹಸು ಹಾಗೂ ಹೋರಿಯನ್ನು ಹತ್ಯೆ ಮಾಡಲಾಗಿದೆ. ಹಸು ಮತ್ತು ಹೋರಿಯನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಹೊತ್ತೊಯ್ದಿದ್ದಾರೆ.
ದೇವರಪುರದ ನಿವಾಸಿ ಅಜಿತ್ಕುಮಾರ್ ಅವರಿಗೆ ಸೇರಿದ ಹಸುವನ್ನು ಮತ್ತು ಮೋಹನ್ಕುಮಾರ್ ಅವರಿಗೆ ಸೇರಿದ ಹೋರಿಯನ್ನು ಮೇಯಲು ಬಿಟ್ಟಿದ್ದು, ಗೋ ಕಳ್ಳರು ಸಮೀಪದ ಪಾರುವಂಗಡ ರಾಮು ಗದ್ದೆಯಲ್ಲಿ ಮಾಂಸ ಮಾಡಿ, ಕೊಂಡೊಯ್ದಿದ್ದಾರೆ. ಈ ವಿಚಾರವಾಗಿ, ಗೋಣಿಕೊಪ್ಪ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಒಂದು ವರ್ಷಗಳಿಂದ ಗೋಕಳ್ಳರು ಹೆಚ್ಚಾಗಿದ್ದಾರೆ ಕೊಟ್ಟಿಗೆಯಲ್ಲಿ ಕಟ್ಟಿದ ಮತ್ತು ಮೇಯಲು ಬಿಟ್ಟ ಜಾನುವಾರುಗಳು ಕಳ್ಳತನವಾಗುತ್ತಿವೆ. ಕದ್ದ ಜಾನುವಾರುಗಳು ಖಸಾಯಿಖಾನೆಗಳಿಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಕಳ್ಳತನ ಮತ್ತು ಕಸಾಯಿಖಾನೆಗೆ ಮಾರಾಟವಾಗುತ್ತಿರುವುದು ಹೆಚ್ಚಾಗುತ್ತಿದೆ.ಈ ಬಗ್ಗೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ನೆಲ್ಲಿರ ಚಲನ್ ಒತ್ತಾಯಿಸಿದ್ದಾರೆ.