ಶನಿವಾರಸಂತೆ, ಜ.೧೩ : ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆ ವೃತ್ತದಿಂದ ಕೊಡ್ಲಿಪೇಟೆಗೆ ಹೋಗುವ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸವಾರರಿಗೆ ಸಂಚಾರ ತ್ರಾಸದಾಯಕವಾಗಿದೆ.
ಎರಡು ತಿಂಗಳಿನಿAದ ಪಕ್ಕದ ಚರಂಡಿ ಬ್ಲಾಕ್ ಆಗಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ವಾಹನಗಳ ಮೇಲೆ ಕೊಳಚೆ ನೀರಿನ ಅಭಿಷೇಕವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ರಸ್ತೆ ಕಾಣದೇ ಬಿದ್ದೆದ್ದು ಸಾಗುವ ದೃಶ್ಯ ಸಾಮಾನ್ಯವಾಗಿದೆ. ಇಷ್ಟಾದರೂ ಸಂಬAಧಪಟ್ಟ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಹುಲುಸೆ ಗ್ರಾಮದ ಭರತ್, ಶಿವಕುಮಾರ್, ಗುಡುಗಳಲೆ ಗ್ರಾಮದ ಮಹೇಶ್ ಹಾಗೂ ಇತರ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗದ ಜಂಕ್ಷನ್‌ನಿAದ ದುರಸ್ತಿ ಕಾಣದ ರಸ್ತೆಯಲ್ಲಿ ಗುಂಡಿಗಳೇ ತುಂಬಿವೆ. ಚರಂಡಿಯ ಕೊಳಚೆ ನೀರು ತುಂಬಿ ರಸ್ತೆಯಲ್ಲಿ ಹರಿದು ಗುಂಡಿಗಳಲ್ಲಿ ನಿಂತು ಸಂಚಾರ ತ್ರಾಸದಾಯಕವಾಗಿದ್ದರೂ ಪಂಚಾಯಿತಿ ಆಡಳಿತ ಮಂಡಳಿಯವರಾಗಲೀ, ಅಭಿವೃದ್ಧಿ ಅಧಿಕಾರಿಯವರಾಗಲೀ, ಲೋಕೋಪಯೋಗಿ ಇಲಾಖೆಯವರಾಗಲೀ, ಇಂಜಿನಿಯರ್‌ಗಳಾಗಲಿ ಗಮನ ಹರಿಸುತ್ತಿಲ್ಲ. ಕೆಲವೆಡೆ ರಸ್ತೆಯಲ್ಲಿ ಒಂದಡಿಯಷ್ಟು ಗುಂಡಿ ಬಿದ್ದಿದೆ. ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಡುಗಳಲೆ-ಕೊಡ್ಲಿಪೇಟೆ ಮುಖ್ಯರಸ್ತೆ ಹಾಗೂ ಬ್ಲಾಕ್ ಆಗಿರುವ ಚರಂಡಿ ಅವ್ಯವಸ್ಥೆ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಾಗಲೀ ಲೋಕೋಪಯೋಗಿ ಇಲಾಖೆಯವರಾಗಲಿ ಶೀಘ್ರ ಗಮನ ಹರಿಸಿ ದುರಸ್ತಿಪಡಿಸಲಿ ಎಂದು ಗುಡುಗಳಲೆ-ಹುಲುಸೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.