ಪೊನ್ನಂಪೇಟೆ, ಡಿ. ೧೩: ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖಾ ಯೋಗಂ ವತಿಯಿಂದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಮಾಚಯ್ಯ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಅರುಣ್ ಮಾಚಯ್ಯ ಅವರು ಶ್ರೀ ನಾರಾಯಣ ಗುರುಗಳು ದೇಶ ಕಂಡ ಮಹಾನ್ ಸಂತರು ಮತ್ತು ಸಮಾಜ ಸುಧಾರಕರು. ಇವರ ಆದರ್ಶ ಹಾಗೂ ಚಿಂತನೆ ಇಡೀ ವಿಶ್ವಕ್ಕೆ ಮಾದರಿ ಎಂದರು. ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖಾ ಯೋಗಂ ಉಪಾಧ್ಯಕ್ಷ ಪಿ.ಜಿ. ರಾಜಶೇಖರ್, ಮಹಿಳಾ ಘಟಕ ನಿಕಟಪೂರ್ವ ಅಧ್ಯಕ್ಷೆ ರಮಾವತಿ, ಕಾರ್ಯದರ್ಶಿ ವಿ.ಅರ್. ಸುಧೀರ್, ಕೋಶಾಧಿಕಾರಿ ಸುರೇಂದ್ರ ಸೂರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಹದೇವನ್, ಪಿ. ಕೆ ಪ್ರವೀಣ್, ಟಿ.ವಿ ಪ್ರೇಮನ್, ಸುದರ್ಶನ್, ವಿ. ಆರ್.ಸಫ್ತೇಶ್, ರಜನಿ ಮಧುರಾಜ್, ವಾಸಂತಿ ಬಾಲನ್, ಪ್ರೀತು ಪ್ರಭಾಕರ್ ಹಾಜರಿದ್ದರು.