ಸಿದ್ದಾಪುರ, ಜ. ೧೩: ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ತಡರಾತ್ರಿಯಲ್ಲಿ ಅಂಗಡಿಗಳಿಗೆ ನಕಲಿ ನೋಟುಗಳು ಸದ್ದಿಲ್ಲದೆ ಲಗ್ಗೆ ಇಡುತ್ತಿದೆ. ಗೂಡಂಗಡಿಗಳು ಹಾಗೂ ವಯಸ್ಸಾದವರನ್ನು ಟಾರ್ಗೆಟ್ ಮಾಡಿ ನಕಲಿ ನೋಟು ನೀಡಿ ಯಾಮಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಅತಿ ಹೆಚ್ಚು. ೨೦೦ ರೂ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಕೊಡಲೇ ಪೊಲೀಸರು ಎಚ್ಚೆತ್ತು ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. - ವಾಸು