ಗೋಣಿಕೊಪ್ಪಲು, ಜ. ೧೩: ಕೊಡಗಿನಲ್ಲಿ ಪ್ರಥಮ ಬಾರಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಸುಮಾರು ರೂ.೪೦ ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಕಾಮಗಾರಿಯೂ ಆರಂಭಗೊAಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಕ್ರೀಡಾ ಸಂಕೀರ್ಣವು ದ.ಕೊಡಗಿನ ವಿ.ಬಾಡಗದ ೧೧.೫೦ ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ.

ಕ್ರೀಡೆಯ ತವರೂರು ಕೊಡಗು ಜಿಲ್ಲೆಯಲ್ಲಿ ಅತೀ ದೊಡ್ಡದಾದ ಯೋಜನೆ ಇದಾಗಿದ್ದು ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಗೆ ಆರಂಭದಲ್ಲಿ ರೂ.೪೦ ಕೋಟಿ ಹಣವನ್ನು ವಿನಿಯೋಗ ಮಾಡಲಾಗುತ್ತಿದೆ.

ರಾಜ್ಯಸಭೆ ಸದಸ್ಯ ಅಜಯ್ ಮಾಕನ್ ತಮ್ಮ ೬ ವರ್ಷದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಪೂರ್ಣ ಅನುದಾನವನ್ನು ಕ್ರೀಡಾ ಸಂಕೀರ್ಣಕ್ಕೆ ವಿನಿಯೋಗಿಸಲು ಮುಂದಾಗಿದ್ದು ಪ್ರತಿ ವರ್ಷವೂ ಹಂತಹAತವಾಗಿ ಬಿಡುಗಡೆಯಾಗುವ ಅನುದಾನವನ್ನು ಈ ಯೋಜನೆಗೆ ಸದ್ಬಳಕೆ ಮಾಡಲಾಗುತ್ತಿದೆ. ಅಜಯ್ ಮಾಕನ್ ಅವರ ಆತ್ಮೀಯತೆ ಹೊಂದಿರುವ ಶಾಸಕ ಪೊನ್ನಣ್ಣ ಅವರು, ಮಾಕನ್ ಅವರ ರಾಜ್ಯಸಭಾ ಅನುದಾನದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.

ಸುAದರ ಪರಿಸರದ ನಡುವೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದಲ್ಲಿರುವ ೧೧.೫೦ ಎಕರೆ ಸರ್ಕಾರಿ ಜಾಗವನ್ನು ಈಗಾಗಲೇ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಕೊಡಗು ಜಿಲ್ಲಾಡಳಿತದಿಂದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೆಸರಿಗೆ ಖಾತೆ ಮಾಡಲಾಗಿದೆ. ವಿಶೇಷವೆಂದರೆ, ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಪೂರಕವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಕೆಲವರು ಗ್ರಾಮದ ಅಭಿವೃದ್ಧಿಯ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ ಸಹಕರಿಸಿದ್ದಾರೆ.

ದೆಹಲಿ ಮೂಲದ ಅಜಯ್ ಮಾಕನ್ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಅವರ ನಾಮಪತ್ರ ಹಾಗೂ ದಾಖಲೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ವಹಿಸಲಾಗಿತ್ತು. ಇದರಿಂದ ಆತ್ಮೀಯ ಒಡನಾಟ ಪೊನ್ನಣ್ಣನವರಿಗಿತ್ತು.

ವಿ.ಬಾಡಗ ಗ್ರಾಮದಲ್ಲಿ ವಿವಿಧ ಕ್ರೀಡೆಗಳ ತರಬೇತಿ ನೀಡುವ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ರೂ.೪೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಇಲ್ಲಿ ಎಲ್ಲ ರೀತಿಯ ಕ್ರೀಡೆಗಳ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಹನ್ನೊಂದುವರೆ ಎಕರೆ ಜಾಗದಲ್ಲಿರುವ ಕಾಡು ಕಡಿದು, ಸ್ಥಳ ಸಮತಟ್ಟು ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕೊಳವೆ ಬಾವಿ ತೆಗೆಯಲಾಗಿದ್ದು, ಸಾಕಷ್ಟು ನೀರಿನ ವ್ಯವಸ್ಥೆ ಲಭ್ಯವಿದೆ.

ಕ್ರೀಡಾ ವಸತಿ ಶಾಲೆಯೂ ಸ್ಥಾಪನೆಯಾಗಲಿದೆ. ಪ್ರಮುಖವಾಗಿ ಕೃತಕ ಹುಲ್ಲುಹಾಸಿನಲ್ಲಿ ಹಾಕಿ ಮೈದಾನ ನಿರ್ಮಾಣವಾಗಲಿದೆ. ಒಲಂಪಿಕ್‌ಗೆ ಅರ್ಹತೆಯ ಈಜುಕೊಳ, ಎರಡು ಬ್ಯಾಡ್ಮಿಂಟನ್ ಕೋರ್ಟ್, ಟೆನ್ನಿಸ್ ಕೋರ್ಟ್, ಶೂಟಿಂಗ್ ಕೋರ್ಟ್ ನಿರ್ಮಾಣವಾಗಲಿದೆ. ಕ್ರಿಕೆಟ್ ಪಿಚ್‌ನೊಂದಿಗೆ ಫುಟ್ಬಾಲ್ ಮೈದಾನ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ನಿರ್ಮಿಸುವ ಯೋಚನೆಯೂ ಇದೆ. ಸುಸಜ್ಜಿತ ಜಿಮ್ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತಿಗೆ ಅಗತ್ಯ ವ್ಯವಸ್ಥೆ ಒದಗಿಸಲಾಗುವುದು.

ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗಿನ ಜನರು ದೈಹಿಕವಾಗಿ ಸಮರ್ಥವಾಗಿರುತ್ತಾರೆ. ಸೂಕ್ತ ಕ್ರೀಡಾ ತರಬೇತಿ ಮೂಲಕ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಮಾಡಲಾಗುವುದು ಎಂದು ಶಾಸಕ ಪೊನ್ನಣ್ಣ ತಿಳಿಸಿದ್ದಾರೆ.

ವಿ.ಬಾಡಗ ಗ್ರಾಮಕ್ಕೆ ಇತ್ತೀಚೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ, ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮ್ಮಯ್ಯ, ಸ್ಥಳೀಯ ಮುಖಂಡರಾದ ತೀತಿಮಾಡ ಸದನ್, ಕಂಜಿತAಡ ಪೂವಣ್ಣ, ಕೊಂಗAಡ ಕಾಶಿ ಕಾರ್ಯಪ್ಪ ಕೊಂಗAಡ ರಚನ್ ಉತ್ತಪ್ಪ, ಚೇಂದAಡ ಅಯ್ಯಪ್ಪ, ಜೇಮಿರ ಪ್ರಕಾಶ್ ಪೂವಯ್ಯ, ಚಂದೂರ ಜಗನ್ ರಂಜಿತ್, ಚೇಮಿರ ಧವನ್ ದೇವಯ್ಯ, ತೀತಿಮಾಡ ಬೋಸ್ ಬೋಪಣ್ಣ, ಚೇನಂಡ ರೋಷನ್ ಮತ್ತಿತರರು ಹಾಜರಿದ್ದರು.

-ಹೆಚ್.ಕೆ ಜಗದೀಶ್