ಮಡಿಕೇರಿ, ಜ. ೧೩: ಬಾಳೆಲೆ ವಿಜಯಲಕ್ಷಿö್ಮ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿಗೆ ಆರ್ಥಿಕ ನೆರವು ನೀಡಲಾಯಿತು. ೧೯೯೭-೧೯೯೮ನೇ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಮುಗಿಸಿದ ಹಳೆಯ ವಿದ್ಯಾರ್ಥಿಗಳಾದ ಶಿವದಾಸನ್, ವನಿತಾ, ಸುಂದರ, ಶಿವಪ್ಪ, ಮುಕುಂದ, ಅಶ್ವಿನಿ, ವಸಂತಿ, ಅರವಿಂದ, ಪವನ್, ಮಂಜುನಾಥ್, ಬೀಮಣಿ ಅವರುಗಳು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಜಯಲಕ್ಷಿö್ಮÃ ಪ್ರೌಢಶಾಲೆಯ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯನ್ನು ಪ್ರೋತ್ಸಾಹಿಸಲು ರೂ.೨೦,೨೫೦ ಧನ ಸಹಾಯವನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಂಜುನಾಥ್, ವಿದ್ಯಾರ್ಥಿಗಳು ಆರ್ಥಿಕ ನೆರವಿನ ಸದ್ಬಳಕೆ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ವಿದ್ಯಾಸಂಸ್ಥೆಯ ಪರವಾಗಿ ಹಿರಿಯ ಸಹಾಯಕ ಅಧ್ಯಾಪಕರಾದ ಚಂದ್ರಶೇಖರ್, ನಗದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವೀಕರಿಸಿದರು.