ಸೋಮವಾರಪೇಟೆ, ಜ. ೧೩: ಸಮೀಪದ ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನಕ್ಕೆ ನಿರ್ಮಿಸಲು ಉದ್ದೇಶಿಸಲಾಗಿರುವ ಅಡುಗೆ ಕೊಠಡಿ ಕಾಮಗಾರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಭೂಮಿ ಪೂಜೆ ನೆರವೇರಿಸಿದರು.
ಈ ಭಾಗದ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬಳಕೆಯಾಗುತ್ತಿರುವ ಸಮುದಾಯ ಭವನಕ್ಕೆ ಸೂಕ್ತ ಅಡುಗೆ ಕೋಣೆ ಇಲ್ಲದೇ ಇರುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿಕೊಂಡ ಮೇರೆಗೆ ಸ್ಪಂದಿಸಿದ ಹರಪಳ್ಳಿ ರವೀಂದ್ರ ಅವರು, ವೈಯುಕ್ತಿಕವಾಗಿ ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿದ್ದು, ಅದರಂತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ. ಈರಪ್ಪ, ಕಾರ್ಯದರ್ಶಿ ಹೆಚ್.ಎಂ. ಲೋಕೇಶ್, ಬೆಟ್ಟದಕೊಪ್ಪ-ಬೆಟ್ಟದಳ್ಳಿ ಗ್ರಾಮಾಧ್ಯಕ್ಷ ಎಂ.ಆರ್. ಸಂಪತ್ಕುಮಾರ್, ಶಾಂತಳ್ಳಿ ವಿಎಸ್ಎಸ್ಎನ್ ನಿರ್ದೇಶಕ ಜಿ.ಹೆಚ್. ರಾಜೇಶ್, ಬಿ.ಆರ್. ಶಿವಕುಮಾರ್, ಪ್ರವೀಣ್ಕುಮಾರ್, ಪರಮೇಶ್, ಬೆಟ್ಟದಳ್ಳಿ ಪೃಥ್ವಿ, ಸಂದೇಶ್ ಸೇರಿದಂತೆ ಇತರರು ಇದ್ದರು.