ಸೋಮವಾರಪೇಟೆ, ಜ. ೧೪: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಂಬAಧಿಸಿದAತೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರು, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರೊಂದಿಗೆ ಚರ್ಚೆ ನಡೆಸಿದರು.
ತಾಲೂಕು ಕಚೇರಿಯಲ್ಲಿ ದುರಸ್ತಿ ಕಡತಗಳ ಶೀಘ್ರ ವಿಲೇವಾರಿಗೆ ಸೂಚನೆ ನೀಡಬೇಕು. ಕೊಡ್ಲಿಪೇಟೆ ಭಾಗದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸುವುದೂ ಸೇರಿದಂತೆ, ಸರ್ಕಾರಿ ಆಸ್ಪತ್ರೆಗೆ ಸೌಲಭ್ಯ ಒದಗಿಸಬೇಕು ಎಂದು ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮನವಿ ಮಾಡಿದರು.
ಮಾದಾಪುರವನ್ನು ಕೇಂದ್ರವಾಗಿಟ್ಟುಕೊAಡು ಹೋಬಳಿ ರಚನೆ ಮಾಡಬೇಕು. ಈ ಭಾಗದ ಸಾರ್ವಜನಿಕರು ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಸೋಮವಾರಪೇಟೆಗೆ ಅಲೆದಾಡುವುದನ್ನು ತಪ್ಪಿಸಬೇಕು. ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಶಾಸಕರ ಗಮನ ಸೆಳೆದರು. ಜಾಗದ ದುರಸ್ತಿಗೆ ಸಂಬAಧಿಸಿದAತೆ ಹಲವಾರು ರೈತರ ಅರ್ಜಿಗಳನ್ನು ಫಾರೆಸ್ಟ್ಗೆ ವರ್ಗಾಯಿಸಲಾಗಿದೆ. ಇದನ್ನು ತಕ್ಷಣ ವಾಪಸ್ ಪಡೆಯಲು ತಹಶೀಲ್ದಾರ್‌ಗೆ ಸೂಚಿಸಬೇಕು. ಇಂತಹ ಅರ್ಜಿಗಳನ್ನು ಕಂದಾಯ ಇಲಾಖೆಯೇ ವಿಲೇ ಮಾಡಬೇಕು. ಶನಿವಾರಸಂತೆ ನಾಡ ಕಚೇರಿ ದುರಸ್ತಿ ಕಾರ್ಯ ತುರ್ತಾಗಿ ನಡೆಸಬೇಕು. ತೋಳೂರುಶೆಟ್ಟಳ್ಳಿ-ಇನಕನಹಳ್ಳಿ ರಸ್ತೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಿರ್ಮಿಸಬೇಕು. ಕೆಲವೆಡೆ ಸಮರ್ಪಕತೆ ಕಾಣುತ್ತಿಲ್ಲ. ಉಬ್ಬುಗಳನ್ನು ತೆರವುಗೊಳಿಸಿಲ್ಲ ಎಂದು ಅರುಣ್ ಗಮನ ಸೆಳೆದರು.
ಮಾದಾಪುರ ಹೋಬಳಿ ಕೇಂದ್ರವನ್ನಾಗಿಸುವ ಬಗ್ಗೆ ಯೋಜನೆ ಸಿದ್ಧಗೊಳ್ಳುತ್ತಿದೆ. ಜನಗಣತಿ ಕಾರ್ಯದ ನಂತರ ಈ ಬಗ್ಗೆ ಅಂತಿಮಗೊಳ್ಳಲಿದೆ. ಉಳಿದಂತೆ ಸಮಿತಿಯ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಶಾಸಕರು ಹೇಳಿದರು.
ಸೋಮವಾರಪೇಟೆ ಪಟ್ಟಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸಲು ಪೇ ಪಾರ್ಕಿಂಗ್ ಯೋಜನೆಗೆ ಚಾಲನೆ, ದೋಣಿಗಾಲ್-ಮಡಿಕೇರಿ ಹೆದ್ದಾರಿ ಅಭಿವೃದ್ಧಿಯ ಡಿಪಿಆರ್‌ಗಾಗಿ ೭ ಕೋಟಿ ಅನುದಾನ ಬಿಡುಗಡೆ ಮಾಡಿರುವುದು. ಶನಿವಾರಸಂತೆ ಬಸ್ ನಿಲ್ದಾಣದ ಬೇಡಿಕೆ ಈಡೇರಿಸಿರುವುದು, ಸಿ. ಮತ್ತು ಡಿ. ಭೂಮಿ ಸಮಸ್ಯೆ ನಿವಾರಣೆಗೆ ಸಮಿತಿ ರಚಿಸಿರುವ ಕ್ರಮಗಳನ್ನು ಸ್ವಾಗತಿಸಿ ಶಾಸಕ ಡಾ. ಮಂತರ್ ಗೌಡರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ವಸಂತ್, ಮೋಹಿತ್ ತಿಮ್ಮಯ್ಯ, ಅನಂತ್‌ಕುಮಾರ್, ಹೂವಯ್ಯ ಮಾಸ್ಟರ್, ನಾಗಂಡ ಭವಿನ್, ತ್ರಿಶೂಲ್ ಹರಗ ಸೇರಿದಂತೆ ಇತರರು ಇದ್ದರು.