ಮಡಿಕೇರಿ, ಜ. ೧೪: ನೆಲ್ಲಿಪುದಿಕೇರಿ ನಾಡ್ನ ಕಟ್ಟೆಮಾಡು ಗ್ರಾಮದಲ್ಲಿ ಊರೊರ್ಮೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಮಂದ್ನಲ್ಲಿ ಕೊಡವ ಜನಾಂಗದವರು, ಭಾಷಿಕ ಜನಾಂಗದವರು ಸೇರಿ ಊರಿನ ಮಂದ್ತಕ್ಕರು ಹಾಗೂ ಮಂದ್ ಸಮಿತಿ ಮುಂದಾಳತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.
ಸಮಿತಿ ಅಧ್ಯಕ್ಷರಾದ ಚಂಗಣಮಕ್ಕಡ ವಿನು ಅಪ್ಪಯ್ಯ ಹಾಗೂ ಆಡಳಿತ ಮಂಡಳಿಯವರ ಸಹಕಾರದಲ್ಲಿ ಕಾರ್ಯಕ್ರಮ ಜರುಗಿತು. ಮೊದಲಿಗೆ ಊರಿನ ಎಲ್ಲಾ ಕೊಡವ ಹಾಗೂ ಕೊಡವ ಭಾಷಿಕ ಜನಾಂಗದ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಹಾಗೂ ವಾಲಗದೊಂದಿಗೆ ಮುಖ್ಯರಸ್ತೆಯಿಂದ ಮಂದ್ತನಕ ಮೆರವಣಿಗೆ ನಡೆಸಿದರು.
ಊರ ದೇವಾನು ದೇವತೆಗಳು, ಎಲ್ಲಾ ಒಕ್ಕಡ ಗುರುಕಾರಣರನ್ನು ನೆನೆದು ಅಕ್ಕಿ ಹಾಗೂ ಪುಷ್ಪವನ್ನು ಹಾಕಿ ಪ್ರಾರ್ಥಿಸಲಾಯಿತು. ಕೋಲಾಟ, ವಾಲಾಗತಾಟ್ ಸೇರಿ ವಿವಿಧ ರೀತಿಯ ಮನೋರಂಜನಾ ಕಾರ್ಯವನ್ನು ನಡೆಸಲಾಯಿತು.
ಎಲ್ಲಾ ಕುಟುಂಬರ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಊಟ ಉಪಚಾರ ಹಾಗೂ ವಾಲಗತಾಟ್ ಮೂಲಕ ಊರೊರ್ಮೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮAದ್ ಸಮಿತಿ ಉಪಾಧ್ಯಕ್ಷ ಸಾದೇರ ಮಧು ಗಣಪತಿ, ಖಜಾಂಚಿ ನಂದೇಟಿರ ನಿಶು ನಂಜಪ್ಪ ಹಾಗೂ ಕಾರ್ಯದರ್ಶಿ ಅಚ್ಚಕಾಳೆರ ಸಂತು ಅಪ್ಪಣ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.