ನಾಪೋಕ್ಲು, ಜ. ೧೪: ಎಮ್ಮೆಮಾಡು ಶಹೀದಿಯ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಸಿ.ಎ ಶಾದುಲಿ ಹಾಜಿ ನೇಮಕವಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಪಿ.ವೈ ಮೊಯ್ದು, ಉಪಾಧ್ಯಕ್ಷರಾಗಿ ಉಸ್ಮಾನ್ ನೆರೂಟ್, ಕೋಶಾಧಿಕಾರಿಯಾಗಿ ಚಕ್ಕೇರ ಇಬ್ರಾಹಿಂ ಹಾಜಿ, ಸಹ ಕಾರ್ಯದರ್ಶಿಯಾಗಿ ಆಶ್ರಫ್ ಬಿ. ಯು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕರ್ ಸಕಾಫಿ, ಅಬ್ದುಲ್ ಖಾದರ್ ಸಹದಿ, ಶೌಕತ್ ಸಿ.ಎ, ಉಮ್ಮರ್ ಮಜೇರಿ, ಕನ್ನಡಿಯಂಡ ಉಮರ್ ಹಾಜಿ, ಉಸ್ಮಾನ್ ಮಂದಲ್ ಅವರನ್ನು ಆಯ್ಕೆ ಮಾಡಲಾಯಿತು.
ಮದರಸ ಸಭಾಂಗಣದಲ್ಲಿ ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಹುಸೇನ್ ಸಕಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.