ನಾಪೋಕ್ಲು, ಜ. ೧೪: ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪೆರಾಜೆ ವತಿಯಿಂದ ಶ್ರೀ ಸೋಮನಾಥ ದೇವಸ್ಥಾನದ ಸ್ವಾಭಿಮಾನ ಪರ್ವ, ಸಾವಿರ ವರ್ಷಗಳ ಅಖಂಡ ನಂಬಿಕೆ ಶಿವನ ಶಾಶ್ವತ ಶಕ್ತಿಯ ಪ್ರತೀಕ ಈ ಹಿನ್ನಲೆಯಲ್ಲಿ ಶನಿವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ ಸುಭಾಷ್ ಬಂಗಾರಕೋಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಮಾಜಿಕೊಡಿ , ಪೆರಾಜೆ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಹಾಗೂ ಬಿಜೆಪಿ ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.