ಗೋಣಿಕೊಪ್ಪಲು, ಜ. ೧೪: ಮಾಯಮುಡಿಯ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ದೊಡ್ಡಮಾಡ್, ಮಾಯಮುಡಿ, ಇವರ ವತಿಯಿಂAದ ಮಾಯಮುಡಿಯ ಆಪಟ್ಟಿರ ಅನಿಲ್‌ಕುಮಾರ್ ಕಾಫಿ ತೋಟದಲ್ಲಿ ಕಾಫಿ ಕಸಿ ಕಾರ್ಯಾಗಾರವು ಜರುಗಿತು.

ಪ್ರಗತಿಪರ ರೈತ ರಾಷ್ಟç ಪ್ರಶಸ್ತಿ ವಿಜೇತ, ಕಾಫಿ ಮಂಡಳಿಯಲ್ಲಿ ಉನ್ನತ ಹುದ್ದೆ ಹೊಂದಿ ನಿವೃತ್ತಿಯಾಗಿರುವ ಬಿ.ಟಿ. ಶಿವರಾಮ್‌ರೈ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡುವ ಮೂಲಕ, ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದರು. ಕಾಫಿ ಗಿಡಗಳಿಗೆ ಕೇವಲ ನೀರು ಹಾಕುವುದು, ಗೊಬ್ಬರ ಹಾಕುವುದು ಮುಖ್ಯವಲ್ಲ ಇದರಿಂದ ಹೆಚ್ಚಿನ ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಹೆಚ್ಚಿನ ಇಳುವರಿಗಾಗಿ ಕಾಫಿ ಗಿಡದ ನಿರ್ವಹಣೆ ಉತ್ತಮವಾಗಿದ್ದಲ್ಲಿ ನಿರೀಕ್ಷಿತ ಫಸಲನ್ನು ಪಡೆಯಬಹುದು ಎಂದರು.

ಕಾಫಿಯ ಬಗ್ಗೆ ಬೆಳೆಗಾರರಲ್ಲಿದ್ದ ಸಂಶಯಗಳನ್ನು ನಿವಾರಣೆಗೊಳಿಸಿದರು. ಸಮಯಕ್ಕೆ ಸರಿಯಾಗಿ ಗಿಡಗಳಿಗೆ ಒದಗಿಸಬೇಕಾದ ರಸ ಗೊಬ್ಬರ ನೀರು ಇತ್ಯಾದಿ ಬಗ್ಗೆ ವಿವರ ಒದಗಿಸಿದರು. ಈ ವಿಶೇಷ ಕಾರ್ಯಾಗಾರದಲ್ಲಿ ದ.ಕೊಡಗಿನ ಕುಟ್ಟ, ಬಾಳೆಲೆ, ತಿತಿಮತಿ, ಬಿರುನಾಣಿ, ಟಿ.ಶೆಟ್ಟಿಗೇರಿ, ತೆರಾಲು, ಹೈಸೊಡ್ಲೂರು, ಕಿರುಗೂರು, ಹುದಿಕೇರಿ, ಬೇಗೂರು, ನೊಕ್ಯ ಸೇರಿದಂತೆ ವೀರಾಜಪೇಟೆ ತಾಲೂಕಿನ ನಾನಾ ಕಡೆಯ ಬೆಳೆಗಾರರು,ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಮಾಯಮುಡಿ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಸಣ್ಣುವಂಡ ರಮೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಾಗಾರದಲ್ಲಿ ರೈತರಾದ ಚೆಪ್ಪುಡಿರ ಕಾರ್ಯಪ್ಪ, ಹಲವು ಅಭಿಪ್ರಾಯಗಳನ್ನು ರೈತರೊಂದಿಗೆ ಹಂಚಿಕೊAಡರು.

ಕಾರ್ಯಾಗಾರದಲ್ಲಿ ಸಣ್ಣುವಂಡ ವಿಶ್ವನಾಥ್, ಆಪಟ್ಟಿರ ಬೋಪಣ್ಣ, ಚೆಪ್ಪುಡೀರ ಅಪ್ಪಣ್ಣ, ಕೊಣಿಯಂಡ ಸೋಮಯ್ಯ, ಚೆಪ್ಪುಡೀರ ಕಾರ್ಯಪ್ಪ, ಬಲ್ಯಂಡ ರವಿ, ಸುಧೀರ್, ಆಪಟ್ಟಿರ ಪ್ರದೀಪ್, ಮದ್ರಿರ ಕಂಬ ಕಾರ್ಯಪ್ಪ, ಚಿಮ್ಮಣಮಾಡ ಕೃಷ್ಣ ಗಣಪತಿ, ಜ್ಯೋತಿ ನಾಚಪ್ಪ, ಸುಜಾಪೂಣಚ್ಚ, ಪುಚ್ಚಿಮಾಡ ಕಿಶೋರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.