ಗೋಣಿಕೊಪ್ಪಲು, ಜ. ೧೪: ಅಮ್ಮತ್ತಿ-ತಿತಿಮತಿ ರಸ್ತೆಯ ಅಮ್ಮತಿಯಿಂದ ಪಾಲಿಬೆಟ್ಟದ ಕಡೆಗೆ ತೆರಳುವ ನೂತನ ರಸ್ತೆಯ ಭೂಮಿ ಪೂಜೆ ಹಾಗೂ ಕಾಮಗಾರಿ ಮುಕ್ತಾಯಗೊಂಡ ರಸ್ತೆಯ ಉದ್ಘಾಟನೆ ನಡೆಯಿತು.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟನೆ ನೆರವೇರಿಸಿದರು.
ಲೋಕೋಪಯೋಗಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿರುವ ಶಾಸಕರು, ಮಳೆಯಿಂದಾಗಿ ಹದಗೆಟ್ಟ ಈ ರಸ್ತೆಯನ್ನು ದುರಸ್ತಿಗೊಳಿಸಿ ಮರುಡಾಂಬರೀಕರಣ ಕಾಮಗಾರಿ ಕೈಗೊಂಡಿದ್ದರು. ಅಮ್ಮತ್ತಿಯಿಂದ ಪಾಲಿಬೆಟ್ಟ ಕಡೆಗೆ ಹೋಗುವ, ಇತ್ತೀಚೆಗೆ ಪೂರ್ಣಗೊಂಡ ರಸ್ತೆಯ ಉದ್ಘಾಟನೆಯನ್ನು ಅಮ್ಮತ್ತಿಯಲ್ಲಿ ನೆರವೇರಿಸಿದರು.
ಬೈರಂಬಾಡ ಭಾಗದಲ್ಲಿ ಇದೇ ರಸ್ತೆಯ ಮುಂದುವರಿದ ಭಾಗದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಅಮ್ಮತಿ-ಪಾಲಿಬೆಟ್ಟ ರಸ್ತೆಗೆ ೨ ಕೋಟಿ ಅನುದಾನ ಒದಗಿಸಲಾಗಿದ್ದು, ಅಮ್ಮತಿ-ಮೂರ್ನಾಡು ರಸ್ತೆಯ, ಅಮ್ಮತಿಯಿಂದ ಕೊಂಡAಗೇರಿ ಕಡೆಗೆ, ಬೈರಂಬಾಡ ಬಳಿ ೧ ಕೋಟಿ ೫೦ ಲಕ್ಷ ಅನುದಾನವನ್ನು ಒದಗಿಸಿದ್ದಾರೆ.
ರಸ್ತೆ ಲೋಕಾರ್ಪಣೆ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಾನ್ಸನ್, ವಿ.ಟಿ. ಕನ್ಸಸ್ಟçಕ್ಷನ್ ಪಾಲುದಾರರಾದ ತನು, ವಿಜು ವಲಯ ಅಧ್ಯಕ್ಷ ಹರಿ, ಪಾಲಿಬೆಟ್ಟ ವಲಯ ಅಧ್ಯಕ್ಷ ಕಾಳಪ್ಪ, ಜಿ.ಪಂ. ಮಾಜಿ ಸದಸ್ಯ ಗಣೇಶ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಘಟಕದ ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟಕದ ರಫೀಕ್, ಪಾಲಿಬೆಟ್ಟ ಪಂಚಾಯಿತಿ ಸದಸ್ಯರಾದ ನಾಸಿರ್, ಹಂಸ, ಪಕ್ಷದ ಮುಖಂಡರುಗಳಾದ ಚೆಕು, ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ನೌಶಾದ್, ಅಯೂಬ್, ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ದಿನೇಶ್ (ಕುಶ), ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.