ಸೋಮವಾರಪೇಟೆ, ಜ. ೧೪: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಎಲ್ಲರೂ ಮನಗಂಡು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಮಂತರ್ ಗೌಡ ಸಲಹೆ ನೀಡಿದರು.

ಸೋಮವಾರಪೇಟೆ ಲಯನ್ಸ್ ಕ್ಲಬ್‌ನ ನೇತೃತ್ವದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ, ತಾಲೂಕು ಒಕ್ಕಲಿಗರ ಸಂಘ, ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರ ಬಳಿ ಹೋಗದೇ ಇದ್ದರೆ ರೋಗ ಪತ್ತೆಯಾಗುವುದಿಲ್ಲ. ಒತ್ತಡದ ಜೀವನ, ಅನಿಯಮಿತ ಆಹಾರ ಪದಾರ್ಥಗಳಿಂದ ರೋಗಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಅವಶ್ಯವಾಗಿದೆ ಎಂದರು.

ರೋಗಿಗಳು ತಮ್ಮ ಬಳಿಗೆ ಬರುವ ಸಂದರ್ಭ ವೈದ್ಯರು ತಮ್ಮ ವೈಯುಕ್ತಿಕ ಒತ್ತಡಗಳನ್ನು ಮರೆತು ಸೌಜನ್ಯ, ಪ್ರೀತಿ, ಕಾಳಜಿಯಿಂದ ವರ್ತಿಸಬೇಕು. ವೈದ್ಯರ ಉತ್ತಮ ಮಾತುಗಳು, ಧೈರ್ಯವೇ ರೋಗಿಯ ಅರ್ಧ ರೋಗವನ್ನು ಗುಣಪಡಿಸುತ್ತದೆ ಎಂದ ಶಾಸಕರು, ಶಿಬಿರದಲ್ಲಿ ಭಾಗಿಯಾಗುವ ರೋಗಿಗಳಿಗೆ ಶಸ್ತç ಚಿಕಿತ್ಸೆಯ ಅಗತ್ಯವಿದ್ದರೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡಬೇಕು ಎಂದು ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ರಾಮ್‌ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ಲಯನ್ಸ್ ಕ್ಲಬ್‌ನ ಖಜಾಂಚಿ ತೇಜಸ್ವಿ, ಮಂಜುನಾಥ್ ಚೌಟ, ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ, ವೈದ್ಯಕೀಯ ಸ್ಥಾನೀಯ ವೈದ್ಯಾಧಿಕಾರಿ ಧನಂಜಯ್, ರಕ್ತನಿಧಿ ಘಟಕದ ಮುಖ್ಯಸ್ಥರಾದ ಡಾ. ಕರುಂಬಯ್ಯ, ಡಾ.ಪ್ರವೀಣ್, ಎಸ್.ಕೆ. ಪ್ರಸಾದ್, ಡಾ. ಸತ್ಯ, ಡಾ. ರವೀಂದ್ರ, ಡಾ. ಲಕ್ಷ್ಮೀಪ್ರಸಾದ್ ಅವರುಗಳು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸಾಮಾನ್ಯ ವೈದ್ಯಶಾಸ್ತç ವಿಭಾಗ, ಪ್ರಸೂತಿ ಮತ್ತು ಸ್ತಿçà ರೋಗ ವಿಭಾಗ, ಕೀಲು ಹಾಗೂ ಮೂಳೆ, ನೇತ್ರ ಶಾಸ್ತç, ಇಎನ್‌ಟಿ, ಶಸ್ತç ಚಿಕಿತ್ಸಾ ವಿಭಾಗ, ಮಕ್ಕಳ ತಜ್ಞರು, ಚರ್ಮ ರೋಗ, ಎದೆ ಹಾಗೂ ಶ್ವಾಸಕೋಶ, ಮಾನಸಿಕ ಆರೋಗ್ಯ, ದಂತ ಶಾಸ್ತç, ಸಮುದಾಯ ವೈದ್ಯ ಶಾಸ್ತç, ಆಯುಷ್ ವಿಭಾಗ, ಮೆದುಳು ಆರೋಗ್ಯ ಉಪಕ್ರಮ, ಟಿಸಿಸಿ/ಎನ್‌ಸಿಡಿ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು ಉಪಸ್ಥಿತರಿದ್ದು, ರೋಗಿಗಳನ್ನು ತಪಾಸಣೆ ಮಾಡಿದರು.

ಕೆಲವೊಂದು ರೋಗಿಗಳಿಗೆ ಸ್ಥಳದಲ್ಲಿಯೇ ಔಷಧಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಆಗಮಿಸಿದ್ದ ರಕ್ತದಾನಿಗಳು, ರಕ್ತದಾನ ಮಾಡಿದರು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ೧೧ ಮಂದಿ ಸದಸ್ಯರುಗಳು ಏಕಕಾಲದಲ್ಲಿ ರಕ್ತದಾನ ಮಾಡಿದ್ದು, ವಿಶೇಷವಾಗಿತ್ತು.