ಕಣಿವೆ, ಜ. ೧೪: ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಬಡಾವಣೆಯ ಕುವೆಂಪು ಉದ್ಯಾನವನದಲ್ಲಿ ನಡೆಯಿತು.
ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಕೆ.ದಯಾನAದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಬಡಾವಣೆಯಲ್ಲಿ ೯೦ ಮನೆಗಳಿದ್ದು ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಇದ್ದೇವೆ. ಹಾಗೆಯೇ ಬಡಾವಣೆಯ ಅಭಿವೃದ್ಧಿಗೆ ಎಲ್ಲರೂ ಸೇರಿ ಹೋರಾಟ ನಡೆಸಿದ ಫಲವಾಗಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕಾಡಿದ ಮಳೆಗಾಲದ ಪ್ರವಾಹ ನಿಯಂತ್ರಿಸುವ ಸಲುವಾಗಿ ೪ ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಂಚಿನಲ್ಲಿ ತಡೆಗೋಡೆ ನಿರ್ಮಾಣವಾಗಿದೆ ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಬಡಾವಣೆಯ ಕುಟುಂಬಗಳ ಮಕ್ಕಳಿಗೆ ಕಾಳು ಹೆಕ್ಕುವುದು, ೫೦ ರಿಂದ ೫೦೦ ಮೀಟರ್ ವರೆಗಿನ ಓಟದ ಸ್ಪರ್ಧೆ, ಜ್ಞಾಪಕ ಪರೀಕ್ಷೆ, ರಸಪ್ರಶ್ನೆ ನಡೆಯಿತು. ಪುರುಷರು ಮತ್ತು ಮಹಿಳೆಯರಿಗೆ ಬಾಂಬ್ ಇನ್ ದ ಸಿಟಿ, ಡ್ರಂ ಗೆ ಬಾಲ್ ಹಾಕುವ ಸ್ಪರ್ಧೆ ನಡೆಯಿತು.
ಮಧ್ಯಾಹ್ನದ ಭೋಜನದ ನಂತರ ಮಕ್ಕಳು ಹಾಗೂ ನಿವಾಸಿಗಳಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಬಡಾವಣೆಯ ನಿವಾಸಿಗಳ ಪ್ರತಿಭಾವಂತ ಮಕ್ಕಳು ಹಾಗೂ ಸಾಧಕರನ್ನು ಗುರುತಿಸಲಾಯಿತು. ಬಡಾವಣೆ ವ್ಯಾಪ್ತಿಯ ೧೩ ಮಂದಿ ಪೌರ ಕಾರ್ಮಿಕರನ್ನು ಆಹ್ವಾನಿಸಿ ಅವರಿಗೆ ಭೋಜನದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಡಾವಣೆಯ ಕಾರ್ಯದರ್ಶಿ ಬೀನಾ ಅನಿಲ್ ಕುಮಾರ್, ಖಜಾಂಚಿ ಬಿ.ಎಂ.ರವೀAದ್ರ, ಸಲಹೆಗಾರರಾದ ಕೆ.ಜಿ.ಚಂದ್ರಶೇಖರ್, ನಿರ್ದೇಶಕರಾದ ಸಿ.ಕೆ.ಹೇಮಂತ್, ಅಮರಾವತಿ, ಪ್ರಕಾಶ್ ಇದ್ದರು.
ಬುಟ್ಟಂಡ ಪಿ.ಶರಿ ಕಾರ್ಯಪ್ಪ ನಿರೂಪಿಸಿದರು. ಚಂದ್ರಶೇಖರ್ ಸ್ವಾಗತಿಸಿದರು. ಬಿ.ಎಂ.ರವೀAದ್ರ ವಂದಿಸಿದರು.