ಕರಿಕೆ, ಜ. ೧೪: ಭಾಗಮಂಡಲ - ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ದುರಸ್ತಿ ಕಾಮಗಾರಿಯ ಡಾಂಬರೀಕರಣ ಕಳಪೆಯಾದ ಹಿನ್ನೆಲೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.
ಭಾಗಮಂಡಲ - ಕರಿಕೆ ಮಧ್ಯೆ ಹದಿಮೂರನೇ ಮೈಲು ಎಂಬಲ್ಲಿ ರಸ್ತೆ ತೀವ್ರ ಹದಗೆಟ್ಟಿದ್ದು ಇಲ್ಲಿ ಡಾಂಬರೀಕರಣ ಸಂದರ್ಭ ಹಳೆ ಜಲ್ಲಿ ಹಾಗೂ ಧೂಳನ್ನು ತೆರವು ಮಾಡದೇ ಅದರ ಮೇಲೆಯೇ ಡಾಂಬರೀಕರಣ ಮಾಡುತ್ತಿದ್ದುದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ. ನಾರಾಯಣ ಹಾಗೂ ಗ್ರಾಮಸ್ಥರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗುತ್ತಿಗೆದಾರನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ನಂತರ ಮರು ಡಾಂಬರೀಕರಣ ಮಾಡಿಸಲಾಯಿತು.
ಈ ಸಂದರ್ಭ ಗ್ರಾಮಸ್ಥರಾದ ನಿಡ್ಯಮಲೆ ನಂದ, ಬಿ.ಕೆ. ದಯಾನಂದ, ಎಂ.ಬಿ. ಅರವಿಂದ, ಚೇತನ್ ಹುಲಿಮನೆ, ಅಜಿತ್ ಹೊದ್ದೆಟ್ಟಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.