ಸಿದ್ದಾಪುರ, ಜ. ೧೬: ವೆನಿಜುವೆಲಾ ರಾಷ್ಟçದ ಅಧ್ಯಕ್ಷ ನಿಕೋಲಸ್ ಹಾಗೂ ಅವರ ಪತ್ನಿಯನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಧಿಸಿರುವುದನ್ನು ಖಂಡಿಸಿ ನೆಲ್ಲಿಹುದಿಕೇರಿ ಸಿಪಿಐಎಂ ಪಕ್ಷದ ವತಿಯಿಂದ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಟಿ.ಆರ್ ಭರತ್, ಹೆಚ್.ಬಿ ರಮೇಶ್, ಟಿ.ಟಿ ಉದಯಕುಮಾರ್ ಇನ್ನಿತರರು ಹಾಜರಿದ್ದರು.