ಸೋಮವಾರಪೇಟೆ, ಜ. ೧೬: ಸಮೀಪದ ಅಬ್ಬೂರುಕಟ್ಟೆ ಗ್ರಾಮದ ಕನ್ನಿಕಂಡ ಮೊಣ್ಣಪ್ಪ-ಲೀಲಾವತಿ ದಂಪತಿ ಪುತ್ರಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕೆ.ಎಂ. ಮೈನಾ ಅವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು.

ಸಾಂಸ್ಕೃತಿಕ ರಾಜಕಾರಣಕ್ಕೆ ಡಾ. ಪುನೀತ್ ರಾಜಕುಮಾರ್ ಅವರ ಚಲನಚಿತ್ರಗಳ ಕೊಡುಗೆಯ ಒಂದು ವಿಶ್ಲೇಷಣೆ ಎಂಬ ಪಿ.ಎಚ್.ಡಿ. ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಡಾ. ಮೈನಾ ಕೆ. ಎಂ. ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಮಚಂದ್ರಪ್ಪ ರವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧ ರಚಿಸಿದ್ದು, ಡಾ. ಪುನೀತ್ ರಾಜಕುಮಾರ್ ರವರಿಗೆ ಸಂಬAಧಿಸಿದAತೆ ಇದು ಪ್ರಪ್ರಥಮ ಪಿಎಚ್‌ಡಿ ಕಾರ್ಯವಾಗಿದೆ. ಡಾ. ಮೈನಾ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದ ಕಾಟಿಮಾಡ ರಾಕೇಶ್ ಅವರ ಪತ್ನಿ.