ನಾಪೋಕ್ಲು, ಜ. ೧೭: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಲಯನ್ಸ್ ರೀಜನ್ ಮೀಟ್ ಸಮ್ಮೇಳನದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ಥಳೀಯ ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಹಿರಿಯ ಸದಸ್ಯರುಗಳಾದ ಬೊಪ್ಪೇರ ಕಾವೇರಪ್ಪ ಹಾಗೂ ಸರ್ವೆ ಆಫ್ ಇಂಡಿಯಾ ನಿವೃತ್ತ ಅಧಿಕಾರಿ, ಕೇಟೋಳಿರ ಎಸ್. ಕುಟ್ಟಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಂತೀಯ ಅಧ್ಯಕ್ಷ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಲಯನ್ಸ್ ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್, ವಲಯ ಅಧ್ಯಕ್ಷರುಗಳಾದ ಬಿಂದ್ಯಾ ಗಣಪತಿ, ಲಯನ್ ಸಿ.ಟಿ. ಅಪ್ಪಣ್ಣ, ನಟರಾಜ ಕೆಸ್ತೂರು, ಸಮ್ಮೇಳನ ಅಧ್ಯಕ್ಷೆ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಬೋಪಣ್ಣ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ. ಕುಟ್ಟಪ್ಪ, ಕಾರ್ಯದರ್ಶಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಖಜಾಂಚಿ ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷೆ ಬಿ.ಕೆ ಕನ್ನಿಕ, ಕಾರ್ಯದರ್ಶಿ ಎಂ.ಪಿ. ಧ್ರುವ ದೇವಯ್ಯ, ಖಜಾಂಜಿ ಸಿ. ಅನನ್ಯ ಅಯ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.