ಸಿದ್ದಾಪುರ, ಜ. ೧೭: ವಿದ್ಯುತ್ ಸ್ಪರ್ಶಗೊಂಡು ಎತ್ತು ಸಾವನ್ನಪ್ಪಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಚೆನ್ನಯ್ಯನ ಕೋಟೆ ಗ್ರಾಮದ ನಿವಾಸಿ ಹೆಚ್.ವಿ. ತಿಮ್ಮಯ್ಯ ಎಂಬವರು ತಮ್ಮ ಎತ್ತನ್ನು ಅವರ ಮನೆಯ ಸಮೀಪದ ಸೋಮೇಶ್ ಎಂಬವರ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು.

ಈ ಸಂದರ್ಭ ಗದ್ದೆಯ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿಯಿAದ ವಿದ್ಯುತ್ ಸ್ಪರ್ಶಗೊಂಡು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಬಗ್ಗೆ ತಿಮ್ಮಯ್ಯ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.