ಕುಶಾಲನಗರ, ಜ. ೧೮: ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ತಾ. ೧೯ ರಂದು ಕ್ಯಾಮರಾ ಕಾರ್ಯಾಗಾರ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕುಶಾಲನಗರ ಪರ್ಪಲ್ ಫಾರ್ಮ್ಸ್ ರೆಸಾರ್ಟ್ ಸಭಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಗೆ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ಶಾಸಕÀ ಎ.ಎಸ್. ಪೊನ್ನಣ್ಣ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಉದ್ಯಮಿ ಎಸ್‌ಎಲ್‌ಎನ್ ವಿಶ್ವನಾಥನ್ ಅವರು ಕಾರ್ಯಾಗಾರ ಉದ್ಘಾಟನೆ ಮಾಡಲಿದ್ದಾರೆ ಎಂದು ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್. ಮಹದೇವಪ್ಪ ತಿಳಿಸಿದ್ದಾರೆ.