ಕೋವರ್‌ಕೊಲ್ಲಿ ಇಂದ್ರೇಶ್
ಬೆAಗಳೂರು,ಜ. ೧೯: ಕರ್ನಾಟಕ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ಇ-ಸ್ವತ್ತು ಯೋಜನೆಯನ್ನು ಜಾರಿಗೆ ತಂದಿತು. ಇದರಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಜನರು ಬಹಳ ತಿಂಗಳುಗಳಿAದ ಕಾಯುತ್ತಿದ್ದ ತಮ್ಮ ಆಸ್ತಿಗಳ ಡಿಜಿಟಲ್ ದಾಖಲೆ ಹೊಂದುವ ಆಶಯ ಈಡೇರಿದ್ದಕ್ಕಾಗಿ ನೆಮ್ಮದಿಯ ನಿಟ್ಟುಸಿರಿಟ್ಟರು. ಸ್ವತಃ ಮುಖ್ಯಮಂತ್ರಿಗಳೇ ಈ ಮಹತ್ವಾಕಾಂಕ್ಷೆಯ ಯೋಜನೆಗೆ ೨೦೨೫ರ ಡಿಸೆಂಬರ್ ೨ ರಂದು ಚಾಲನೆ ನೀಡಿದರು.
ಆದರೆ ಜನರ ನೆಮ್ಮದಿ ಕ್ಷಣಿಕವಾಗಿತ್ತು. ಏಕೆಂದರೆ ಸುಮಾರು ಒಂದೂವರೆ ತಿಂಗಳಿನಿAದ ಈವರೆಗೂ ಇಡೀ ರಾಜ್ಯದ ಯಾವುದೇ ಊರಿನಲ್ಲಿ ಯಾರಿಗೂ ಈ ಸ್ವತ್ತು ಪಡೆಯಲು ಸಾದ್ಯವಾಗಿಲ್ಲ!. ರಾಜ್ಯದಲ್ಲಿ ಲಕ್ಷಾಂತರ ಜನರು ನೋಂದಣಿ ಇಲಾಖೆ ನಿಗದಿಪಡಿಸಿರುವ ಲಕ್ಷಾಂತರ ರೂಪಾಯಿಗಳ ಶುಲ್ಕ ತೆತ್ತು ಆಸ್ತಿಯನ್ನು ಖರೀದಿಸಿ ಕಾಯುತ್ತಿದ್ದಾರೆ, ಆದರೆ ಆಸ್ತಿ ಅವರ ಹೆಸರಿಗೆ ವರ್ಗಾವಣೆ ಮಾತ್ರ ಆಗುತ್ತಿಲ್ಲ. ಅಲ್ಲದೆ ಇ-ಸ್ವತ್ತು ದಾಖಲೆ ಇಲ್ಲದಿರುವುದರಿಂದ ಮನೆ , ನಿವೇಶನ ಮಾರಾಟವೂ ಆಗುತ್ತಿಲ್ಲದೆ ಜನರು ಬಸವಳಿದು ಹೋಗಿದ್ದಾರೆ.
ಸರ್ಕಾರ ಬೆಂಗಳೂರಿನ ಯಶವಂತಪುರದಲ್ಲಿ ದೊಡ್ಡದಾದ ಇ-ಸ್ವತ್ತು ಯೋಜನಾ ನಿಯಂತ್ರಣ ಕೇಂದ್ರವನ್ನೂ (ಕಾಲ್ ಸೆಂಟರ್) ಹೊಂದಿದೆ. ಇಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇ-ಸ್ವತ್ತು ಪಡೆಯಲು ಜಿಲ್ಲೆಗೆ ಒಂದರAತೆ ಮತ್ತು ರಾಜ್ಯಾದ್ಯಂತ ಎಲ್ಲರಿಗೂ ಅನುಕೂಲವಾಗುವಂತೆ ಕೇಂದ್ರೀಕೃತ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಆದರೆ ಇಲ್ಲಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಸ್ವೀಕರಿಸಿದರೂ ಸಾಫ್ಟ್ವೇರ್ ಪ್ರಾಬ್ಲಮ್ ಎಂಬ ರೆಡಿಮೇಡ್ ಉತ್ತರಗಳನ್ನು ನೀಡುತ್ತಾರೆ.
ನಿವೇಶನ ಹಾಗೂ ಮನೆಯ ಇ-ಸ್ವತ್ತಿಗಾಗಿ ಸಾರ್ವಜನಿಕರು ಪ್ರತಿದಿನ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಅಲೆದಾಡುವುದರ ಜತೆಗೆ ಕಂಪ್ಯೂಟರ್ ಆಪರೇಟರ್ ಹಾಗೂ ಪಿಡಿಒಗಳನ್ನು ಸಾಫ್ಟ್ವೇರ್ ಸಿದ್ದವಾಯ್ತಾ ಎಂದು ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಬಹಳಷ್ಟು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇ-ಸ್ವತ್ತು ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಇ-ಖಾತಾ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೊಡಗಿನಲ್ಲೂ ಸಮಸ್ಯೆ
ಕೊಡಗಿನ ೧೦೨ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲೂ ಕೂಡ ಇದು ಇದುವರೆಗೂ ಕಾರ್ಯಾರಂಭ ಆಗಿಲ್ಲ. ಜನರು ಕಚೇರಿಗಳಿಗೆ ತಿರುಗುತ್ತಿದ್ದಾರೆ. ಪಂಚಾಯಿತಿಗಳಲ್ಲಿರುವ ಪಿಡಿಒ, ಕಾರ್ಯದರ್ಶಿ, ಅಧ್ಯಕ್ಷರು, ಸದಸ್ಯರು ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ಇದರ ವಿಚಾರವಾಗಿ ಕೇಳಿದಾಗ ನಾಳೆ, ನಾಡಿದ್ದು, ಮುಂದಿನ ವಾರದಲ್ಲಿ ಸರಿಯಾಗುತ್ತಂತೆ ಎಂದು ಹೇಳುತ್ತಿರುವುದರಲ್ಲೇ ತಿಂಗಳು ಕಳೆಯುತ್ತಿವೆ. ಇದರಿಂದ ಕೆಲ ಜನರು ಪಂಚಾಯಿತಿಯಲ್ಲಿ ಕೆಲವೊಮ್ಮೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೇಲೆ ಗಲಾಟೆ ಕೂಡ ಮಾಡಿ ಹೋಗುತ್ತಿದ್ದಾರೆ.
ಸರ್ಕಾರವು ಇ-ಸ್ವತ್ತು ಯೋಜನೆ ಜಾರಿಗೂ ಮುನ್ನ ಒಂದು ವರ್ಷದಿಂದಲೇ ಡಿಜಿಟಲೀಕರಣ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಇಷ್ಟೆಲ್ಲಾ ಪೂರ್ವ ಸಿದ್ದತೆ ನಡೆಸಿ ಯೋಜನೆಯನ್ನು ಜಾರಿಗೆ ತಂದರೂ ಒಂದೂ ಇ-ಸ್ವತ್ತು ಆಗದಿದ್ದುದಕ್ಕೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಪಂಚಾಯ್ತಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನ ಅವರು, ನಮಗೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನೀಡಿರುವ ಮಾಹಿತಿಯ ಪ್ರಕಾರ ಕಂಪ್ಯೂಟರ್ ಸಾಫ್ಟ್ವೇರ್ ಸಮಸ್ಯೆಯಿಂದ ಇ-ಸ್ವತ್ತು ಅಪ್‌ಲೋಡ್ ಸಾಧ್ಯವಾಗುತ್ತಿಲ್ಲ. ತಂತ್ರಾAಶವನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ)ಬದಲಾಯಿಸಲಾಗುತ್ತಿರುವುದರಿAದ ಈ ಸಮಸ್ಯೆ ತಲೆದೋರಿದ್ದು ತಂತ್ರಜ್ಞರು ಸರಿಪಡಿಸುವಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು ೨೨ ಅರ್ಜಿಗಳು ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಬಾಕಿ ಇದ್ದು ಈ ರೀತಿ ಅಪ್‌ಲೋಡ್ ಮಾಡಲು ಬಾಕಿ ಇರುವ ಅರ್ಜಿಗಳ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಜನತೆ ತಮ್ಮ ಆಸ್ತಿ ವಿವರಗಳನ್ನು ಅಪ್‌ಲೋಡ್ ಮಾಡಿದ ನಂತರವಷ್ಟೇ ಅರ್ಜಿಗಳ ನಿಖರ ಸಂಖ್ಯೆ ಗೊತ್ತಾಗಲಿದೆ ಎಂದು ಮಾಹಿತಿ ನಿಡಿದ್ದಾರೆ.
ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಮಿಕ್ಕಿ ಆಸ್ತಿಗಳ ನೋಂದಣಿ ಬಾಕಿ ಉಳಿದಿವೆ. ಹಳೆಯ ಮಾದರಿಯ ಕೈ ಬರಹದ ದಾಖಲೆಗಳ ಆಧಾರದಲ್ಲಿ ಆಸ್ತಿ ನೋಂದಾವಣೆ ಮಾಡುವುದನ್ನು ಸ್ಥಗಿತಗೊಳಿಸಿ ಕರ್ನಾಟಕದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಪಾರದರ್ಶಕತೆ ಹಾಗೂ ವಂಚನೆ ತಡೆಯುವ ಉದ್ದೇಶದಿಂದ ಇ-ಸ್ವತ್ತು ೨.೦ ತಂತ್ರಾAಶಕ್ಕೆ ಚಾಲನೆ ನೀಡಿ ಎರಡು ತಿಂಗಳು ಸಮೀಪಿಸುತ್ತ ಬಂದರೂ ಈ ತಂತ್ರಾAಶವು ತಾಂತ್ರಿಕತೆಯ ದೋಷದಿಂದ ಇನ್ನೂ ಜಾರಿಗೆ ಬರದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.