ಸಿದ್ದಾಪುರ, ಜ. ೧೯: ಹಾಡಹಗಲೇ ಕಾಫಿ ಮಾರಾಟ ಕೇಂದ್ರದಿAದ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಸಾನೀದ್ ಎಂಬವರಿಗೆ ಸೇರಿದ ಎಸ್.ವೈ.ಎಸ್. ಕಾಫಿ ಮಾರಾಟದ ಕೇಂದ್ರದಲ್ಲಿ ಈಚೆಗೆ ಮಧ್ಯಾಹ್ನ ವೇಳೆ ಯಾರು ಇಲ್ಲದ ಸಮಯವನ್ನು ಗಮನಿಸಿದ ಕೇರಳ ಮೂಲದ ಕಳ್ಳನೋರ್ವ ಅಂಗಡಿಯ ಒಳಗೆ ನುಗ್ಗಿ ಕೈಚಳಕದಿಂದ ಅಂಗಡಿಯ ಡ್ರಾಯರಿನಿಂದ ನಗದು ರೂಪಾಯಿ ೧.೧೫ ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕ ಸಾನೀದ್ ದೂರು ನೀಡಿದ್ದರು. ಈ ಬಗ್ಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯಾಗಿರುವ ಕೇರಳ ರಾಜ್ಯದ ತಲಚೇರಿ ಶಿವಪುರ ನಿವಾಸಿ ಹ್ಯಾರಿಸ್ (೪೭) ಎಂಬಾತನನ್ನು ವೀರಾಜಪೇಟೆಯಲ್ಲಿ ಬಂದಿಸಿದ್ದಾರೆ. ಆರೋಪಿ ಹ್ಯಾರಿಸ್ ಈ ಹಿಂದೆ ಕೇರಳ ರಾಜ್ಯದ ಕೂತುಪರಂಬು ಎಂಬಲ್ಲಿ ತೆಂಗಿನಎಣ್ಣೆ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈತ ಕೇರಳ ರಾಜ್ಯದಿಂದ ಬಂದು ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈತನನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿ.ವೈ .ಎಸ್.ಪಿ ಸೂರಜ್ ಸಿ.ಐ. ರಾಜು ಅವರ ಮಾರ್ಗದರ್ಶನದಲ್ಲಿ, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿದ್ದಾಪುರದ ಅಪರಾಧ ಪತ್ತೆದಳದ ಸಿಬ್ಬಂದಿ ಮಣಿಕಂಠ ಹಾಗೂ ಕಿರಣ್ ಪಾಲ್ಗೊಂಡಿದ್ದರು.