ಕೂಡಿಗೆ, ಜ. ೧೯: ಹುದುಗೂರು- ಯಡವನಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳ ಹಿಂಡು ಯಡವನಾಡು ಪ್ರವೀಣ್ ಗೌಡ, ರಮೇಶ್ ಜನಾರ್ದನ, ಉಮೇಶ್ ರಾಜ್ ಅರಸ್, ಗಣಿ ಪ್ರಸಾದ್ ಎಂಬವರಿಗೆ ಸೇರಿದ ರೈತರ ಜಮೀನಿನಲ್ಲಿ ಬೆಳೆಸಲಾಗಿದ್ದ ಸಹಿ ಗೆಣಸು ಬೆಳೆಯನ್ನು ತಿಂದು, ತುಳಿದು ನಷ್ಟಪಡಿಸಿವೆ. ಸ್ಧಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.