ಚೆಯ್ಯAಡಾಣೆ, ಜ. ೧೯: ಎಮ್ಮೆಮಾಡು ಗ್ರಾಮದ ಪಡಿಯಾಣಿಯ ಹಾರಿಸ್ ಎಂಬ ಬಡ ಕುಟುಂಬವೊAದರ ಸಂಕಷ್ಟದ ಪರಿಸ್ಥಿತಿಯನ್ನು ಅರಿತು ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಶ್ವತ ಸೂರು ಕಲ್ಪಿಸಲು ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಹಾಗೂ ಎಸ್ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಚಾಲನೆ ನೀಡಿ ಶುಭ ಹಾರೈಸಿದರು.
ಎಮ್ಮೆಮಾಡು ಜಮಾಅತ್ ಮಾಜಿ ಕಾರ್ಯದರ್ಶಿ ಬಿ.ಯು. ಅಶ್ರಫ್ ಎಮ್ಮೆಮಾಡು ಮಾತನಾಡಿ, ಗ್ರಾಮದಲ್ಲಿದ್ದ ಬಡ ಕುಟುಂಬವೊAದಕ್ಕೆ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಸಂಘಟನೆ ಮನೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ತೋರಿರುವುದು ಶ್ಲಾಘನೀಯ. ಸಮಾಜ ಸೇವಾ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ನೆರವಾದಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿರುವ ಬಡ ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಸೇವಾ ಮನೋಭಾವದಿಂದ ಪ್ರತಿಯೊಬ್ಬರು ಸ್ಪಂದಿಸಿದಲ್ಲಿ ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯವಾಗಲಿದೆ ಎಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ ಮಾತನಾಡಿ, ಹಲವು ವರ್ಷಗಳಿಂದ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ಸಂಘಟನೆ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದು ಅನಾರೋಗ್ಯಕ್ಕೆ ಒಳಗಾದವರು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ಮೂಲಕ ಸೇವೆ ಮಾಡುತ್ತಿದ್ದು ತನ್ನ ವ್ಯಾಪ್ತಿಯಲ್ಲೇ ಕಾಲೋನಿಯೊಂದಕ್ಕೆ ಬಾವಿ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದ ಟ್ರಸ್ಟ್ ಇದು, ಪಡಿಯಾಣಿ ಗ್ರಾಮದಲ್ಲಿರುವ ಬಡ ಕುಟುಂಬವೊAದಕ್ಕೆ ಮನೆ ನಿರ್ಮಿಸಿಕೊಡಲು ದಾನಿಗಳ ಸಹಕಾರದಿಂದ ಮುಂದಾಗಿರುವುದು ಶ್ಲಾಘನೀಯ ಎಂದರು.
ಕೊಡಗಿನ ಬಡವರ ಬೆಳಕು ಚಾರಿಟಿಯ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಕುಶಾಲನಗರ ಹಾಗೂ ಸುಗ್ರಿ ಸುಬ್ರಮಣಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಅಲಿ ನಾಪೋಕ್ಲು ಬಡವರಿಗೆ ನೆರವಾಗುವ ಟ್ರಸ್ಟ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಫತಾಯಿ ಕಡಂಗ, ಉಪಾಧ್ಯಕ್ಷ ಉಮ್ಮರ್ ಎಡಪಾಲ, ಎಸ್ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ, ಮೊಯ್ದು ಕುಟ್ಟಿ ಮುಸ್ಲಿಯಾರ್, ವಕ್ಫ್ ಬೋರ್ಡ್ ಸದಸ್ಯ ಹಂಝ, ಕರವಂಡ ಸುರೇಶ್, ಮೊಯಿದಿನ್ ಕಂಬಿಬಾಣೆ, ಮೂಸ ಹಾಜಿ ಮಾಪಿಲತೊಡ್, ಪಡಿಯಾಣಿ ಖತೀಬ್ ಹಂಝ ರಹ್ಮನಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಜಾಕ್ ಸಿ.ಎ. ಚೆಯ್ಯಂಡಾಣೆ, ಕೋಶಾಧಿಕಾರಿ ಅಶ್ರಫ್, ಸೈಪುದ್ದಿನ್ ಚಾಮಿಯಾಲ, ಹಾರಿಸ್ ಕೊಂಡAಗೇರಿ, ಸಯ್ಯಿದ್ ಅಭಿದ್ ತಂಙಳ್, ಸೈಫುದ್ದಿನ್ ತಂಙಳ್, ಗ್ರಾಮದ ಪ್ರಮುಖರು, ಸೇರಿದಂತೆ ಮತ್ತಿತರರು ಹಾಜರಿದ್ದರು. ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಪ್ರಾರ್ಥಿಸಿ, ಟ್ರಸ್ಟ್ ಕೋಶಾಧಿಕಾರಿ ಅಶ್ರಫ್ ಸ್ವಾಗತಿಸಿ, ವಂದಿಸಿದರು.