*ಗೋಣಿಕೊಪ್ಪ, ಜ. ೨೦: ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿAದ ವೇತನ ಪಾವತಿಯಾಗುತ್ತಿಲ್ಲ ಎಂದು ಕಾರ್ಯಕರ್ತೆಯರು ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ.

ಈ ವಿಚಾರವಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಮಿತ್ರ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಮೂರು ತಿಂಗಳಿAದ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿಯಾಗುತ್ತಿಲ್ಲ. ಇದರಿಂದ, ಕೌಟುಂಬಿಕ ಬದುಕಿಗೆ ಆರ್ಥಿಕ ಹಿನ್ನಡೆ ತಂದಿದೆ. ಇದು ಮಾನಸಿಕ ತೊಳಲಾಟಕ್ಕೂ ಕಾರಣವಾಗಿದೆ. ವೇತನ ವಿಚಾರವಾಗಿ ಒಂದು ತಿಂಗಳ ಸಮಯವನ್ನು ಮುಂದೂಡಬಹುದು, ಆದರೆ ನಿರಂತರ ಮೂರು ತಿಂಗಳು ವೇತನ ಇಲ್ಲದೆ ಇರುವುದು ಸಂಕಷ್ಟದ ಬದುಕಿನೊಳಗೆ ಕಾರ್ಯಕರ್ತೆಯರನ್ನು ತಳ್ಳಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಂಗನವಾಡಿ ಸಂಬAಧಿಸಿದAತೆ ಹಲವಾರು ಕಾರ್ಯಕ್ರಮಗಳು, ಕಚೇರಿ ಸಭೆಗಳು ಎಂದು ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಕೆಲಸದ ಜವಾಬ್ದಾರಿಯ ಒತ್ತಡದಲ್ಲಿ ಇರುತ್ತಾರೆ. ಆದರೆ ಸಂಬಳ ಬಾರದಿರುವುದು ಕರ್ತವ್ಯ ನಿರ್ವಹಿಸಲು ಕೆಲವರಿಗೆ ಹಿನ್ನಡೆಯಾಗುತ್ತಿದೆ ಎಂದು ವೇತನ ಪಾವತಿ ಆಗದಿರುವ ಸಂಕಷ್ಟದ ಸ್ಥಿತಿಯ ಗಾಂಭೀರ್ಯತೆಯನ್ನು ತಿಳಿಸಿದರು. ಸಹಾಯಕಿಯರು ಮೂರು ತಿಂಗಳ ಹಣ ಬಾರದೆ ಇರುವುದರಿಂದ ಕಾಫಿ ಕೊಯ್ಲು ಕಡೆ ತೆರಳುತ್ತಿದ್ದಾರೆ.

೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಅಂಗನವಾಡಿಯನ್ನು ನಿಯಂತ್ರಿಸುವುದು ಅಸಾಧ್ಯವಾಗಿದೆ.

ತುರ್ತು ಸಭೆಗಳು ಮತ್ತು ಇನ್ನಿತರ ಕಾರ್ಯಚಟುವಟಿಕೆಗಳಿಗೆ ಇಲಾಖೆ ಕಚೇರಿಗೆ ಶಿಕ್ಷಕರು ತೆರಳಿದಾಗ ಅಂಗನವಾಡಿಯನ್ನು ನಿಯಂತ್ರಿಸುವುದು ಅಸಾಧ್ಯ. ಸಹಾಯಕಿಯರು ಇಲ್ಲದೆ, ಶಿಕ್ಷಕಿಯರು ಇಲ್ಲದೆ ಅಂಗನವಾಡಿ ಕಾರ್ಯನಿರ್ವಹಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿಯಾದರೆ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು ಎಂದು ಮನವಿ ಮಾಡಿದರು.

ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ ಈ ಸಂದರ್ಭ ಹಾಜರಿದ್ದರು.