ಮಡಿಕೇರಿ, ಜ. ೨೦: ಗ್ರಾö್ಯಂಡ್ ಸ್ಲಾಮ್ ಟೆನ್ನಿಸ್‌ನಲ್ಲಿ ಭಾಗವಹಿಸಲು ರೋಹನ್ ಬೋಪಣ್ಣ ಬಳಿಕ ಕೊಡಗಿನಿಂದ ೨ನೇ ಕ್ರೀಡಾಪಟು ಆಗಿರುವ ಕಲಿಯಂಡ ನಿಕಿ ಪೂಣಚ್ಚ ಅವರು ತಮ್ಮ ಪ್ರಥಮ ಗ್ರಾö್ಯಂಡ್ ಸ್ಲಾಮ್ ಆಸ್ಟೆçÃಲಿಯನ್ ಓಪನ್ ಪಂದ್ಯದಲ್ಲಿ ಪರಾಭವಗೊಂಡರು.

ಆಸ್ಟೆçÃಲಿಯಾದ ಮೆಲ್ಬೋರ್ನ್ನಲ್ಲಿ ಇಂದು ನಡೆದ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ತಮ್ಮ ಜೊತೆ ಆಟಗಾರ ಥೈಲ್ಯಾಂಡ್‌ನ ಇಸಾರೋ ಅವರೊಂದಿಗೆ ಸ್ಪೇನ್ ದೇಶದ ಮಾರ್ಟಿನೇಜ್ ಹಾಗೂ ಮುನಾರ್ ಜೋಡಿಯನ್ನು ಎದುರಿಸಿದರು.

ಪ್ರಥಮ ಸೆಟ್‌ನಲ್ಲಿ ಅತ್ಯುತ್ತಮ ಆಟವಾಡಿ ೬-೬ ಸಮಾನ ಸೆಟ್ ಬಳಿಕ ಟೈ ಬ್ರೇಕರ್‌ನಲ್ಲಿ ೭-೩ ಅಂಕಗಳಿAದ ಸೋಲನುಭವಿಸಿದ ಪೂಣಚ್ಚ-ಇಸಾರೋ ಜೋಡಿ, ೨ನೇ ಸೆಟ್‌ನಲ್ಲಿ ೭-೫ ಗೇಮ್‌ಗಳಿಂದ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದರು.