ಮಡಿಕೇರಿ, ಜ. ೨೦: ಬೆಂಗಳೂರು ಯಲಹಂಕ ಗೌಡ ಸಮಾಜದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟವು ಸಮಾಜದ ಅಧ್ಯಕ್ಷರಾದ ಕುಂಜಳಿಯನ ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲಿ ನೆರವೇರಿತು.

ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಎಂಪ್ಲಾಯಿಸ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಬಳಿಕ ಅಗಲಿದ ಸಮಾಜದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಳಿಕ ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿಯ ಕಾರ್ಯ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮುಂಡಿಸಿ, ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. ಹಾಗೂ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೊಸದಾಗಿ ವಿವಾಹವಾದ ದಂಪತಿಗಳ ಪರಿಚಯ ನಡೆಯಿತು. ಸಮಾಜಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಅವರು, ಸಮಾಜದ ಅಭಿವೃದ್ಧಿಗೆ, ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಯುವಕರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು.

ಇದರೊಂದಿಗೆ ನಂಗಾರು ನಿಂಗರಾಜು, ಕೋಟೇರ ವೇಣುಗೋಪಾಲ್, ಅಚ್ಚಲ್ಪಾಡಿ ಲಕ್ಷಕುಮಾರ್, ಕಲ್ಲುಮುಟ್ಟು ನಿತ್ಯಾನಂದ, ಕನ್ನಡ್ಕ ವಿಜಯಲಕ್ಷಿö್ಮÃ ಜಯರಾಮ್, ಕಲ್ಲುಮುಟ್ಲು ಪವನ್, ಅಯ್ಯೇಟಿರ ಶಾಲಿನಿ ನಿತ್ಯ, ಕೋಳುಮುಡಿಯನ ಮಿಲನ್ ಸೇರಿದಂತೆ ಅನೇಕ ಗಣ್ಯರು ವೇದಿಕೆiÀÄಂಲ್ಲಿದ್ದರು.

ಸಮಾಜದ ಯುವಕ-ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಜನಪದ ಗೀತೆ ಸೇರಿದಂತೆ ವಿವಿಧ ಕಲಾಪ್ರದರ್ಶನಗಳು ಜರುಗಿದವು.