ನಾಪೋಕ್ಲು, ಜ. ೨೨: ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ರೂ. ೩೫ ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನೆರವೇರಿಸಿದರು.

ಎಮ್ಮೆಮಾಡು ಭಾಗದಲ್ಲಿ ಶಾಸಕರ ರೂ. ೩೫ ಲಕ್ಷ ವೆಚ್ಚದ ಅನುದಾನದಲ್ಲಿ ಪ್ರಾರಂಭವಾಗಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿದ ಬಳಿಕ, ಈಗಾಗಲೇ ಈ ಭಾಗದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಐಸಮ್ಮ, ಸದಸ್ಯರಾದ ಗಫೂರ್, ಯೂಸಫ್, ಜಮಾಅತ್ ಅಧ್ಯಕ್ಷ ಹುಸೇನ್ ಸಖಾಫಿ ಹಾಗೂ ಆಡಳಿತ ಮಂಡಳಿ, ಶಾದುಲಿ ಹಾಜಿ, ಹಂಸ ಪಡಿಯಾನಿ, ಅಶ್ರಫ್ ಬಿ.ಯು., ಕೆ.ಎ. ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್, ಮಚ್ಚುರ ರವೀಂದ್ರ, ಮಾಚೇಟಿರ ಕುಶಾಲಪ್ಪ, ಮಣವಟ್ಟಿರ ದಯಾ ಕುಟ್ಟಪ್ಪ, ಅಪ್ಪಚೆಟ್ಟೋಳಂಡ ಮಿಥುನ್, ಐಸ . ಮಾಚಯ್ಯ, ಪಡಿಯಾನಿ ಜಮಾಅತ್ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.