ಮಡಿಕೇರಿ, ಜ. ೨೨: ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ, ಕೋಟ್ಯಂತರ ಹಿಂದೂಗಳ ನಿರೀಕ್ಷೆಯಂತೆ ‘ಶ್ರೀ ರಾಮ ಲಲ್ಲಾ’ನ ಪ್ರತಿಷ್ಠಾಪನೆಯೊಂದಿಗೆ, ಭವ್ಯ ಮಂದಿರ ಲೋಕಾರ್ಪಣೆಗೊಂಡ ಪುಣ್ಯದಿನದ ಅಂಗವಾಗಿ ನಗರದ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ನೆರವೇರಿತು. ವರ್ಷಂಪ್ರತಿಯAತೆ ಈ ಬಾರಿಯೂ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಹಸ್ರಾರು ಮಂದಿಗೆ ಅನ್ನ ಪ್ರಸಾದ ವಿತರಣೆೆ ನಡೆಯಿತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದ ಅನ್ನ ಪ್ರಸಾದ ವಿತರಣಾ ಜಾಗದಲ್ಲಿ ಗಣಪತಿ ಹೋಮವನ್ನು ನಡೆಸಿ, ನಗರದ ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಬೆ.೧೧ ಗಂಟೆಯಿAದ ಆರಂಭಗೊAಡ ಅನ್ನ ಪ್ರಸಾದ ವಿತರಣಾ ಕಾರ್ಯ ಸಂಜೆಯವರೆಗೆ ನಡೆಯಿತು.

ಭಕ್ತಾದಿಗಳಿಗೆ ದಿನದ ವಿಶೇಷವಾಗಿ ಅನ್ನ-ಸಾಂಬಾರು ಮತ್ತು ಪಾಯಸವನ್ನು ವಿತರಿಸಲಾಯಿತು. ಈ ಕಾರ್ಯದಲ್ಲಿ ಸಮಿತಿಯ ಪದಾಧಿಕಾರಿಗಳೊಂದಿಗೆ ನಗರದ ವಿವಿಧ ಸಂಘ ಸಂಸ್ಥೆಯ ನೂರಾರು ಸ್ವಯಂ ಸೇವಕರು ತೊಡಗಿಸಿಕೊಂಡಿದ್ದರು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಪಿ.ಡಿ.ನವೀನ್, ರಘು, ಸದಾಶಿವ ರೈ, ಪ್ರಭು ರೈ, ಆನಂದ, ಶೇಖರ್, ಪ್ರಸಾದ್ ಸಂಪಿಗೆ ಕಟ್ಟೆ ಮತ್ತಿತರ ಪ್ರಮುಖರು ಹಾಜರಿದ್ದರು.

ಗೋಣಿಕೊಪ್ಪ

ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೂರನೇ ವಾರ್ಷಿಕೋತ್ಸವವನ್ನು ಗೋಣಿಕೊಪ್ಪಲು ವಿಶ್ವ ಹಿಂದೂ ಪರಿಷತ್ ಮತ್ತು ರಾಮಭಕ್ತರು ಆಚರಿಸಿದರು. ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ನಂತರ ಬಸ್ ನಿಲ್ದಾಣದಲ್ಲಿ ಭಕ್ತಾದಿಗಳಿಗೆ ಪಲಾವ್ ಮತ್ತು ಸಿಹಿ ವಿತರಿಸಲಾಯಿತು.

ಪ್ರಮುಖರುಗಳಾದ ಗುಮ್ಮಟ್ಟೀರ ಕಿಲನ್ ಗಣಪತಿ, ಸುಬ್ರಮಣಿ, ನೆಲ್ಲಿರ ಚಲನ್, ಮಂಜು ರೈ, ಕೊಣಿಯಂಡ ಬೋಜಮ್ಮ, ರಾಜೇಶ್ ಕೆ., ಸಂಜೀವ್ ನಾಯರ್, ಮಿಟ್ಟು ಸಿಂಗ್, ರಾಮಕೃಷ್ಣ ಭಟ್, ವಿನು, ಮದನ್ ಶೆಟ್ಟಿ, ಬಿ.ಎನ್. ಪ್ರಕಾಶ್, ಮಲಚಿರ ಗಾಂಧಿ, ಗಣೇಶ್, ಲಕ್ಷಿö್ಮÃ ರೆಡ್ಡಿ, ಸಂಧ್ಯಾ, ಗೀತಾ, ವಿವೇಕ್, ಧನಲಕ್ಷಿö್ಮ, ಶಶಿ, ಕಾರ್ತಿಕ್ ಸೇರಿದಂತೆ ಹಲವರು ಇದ್ದರು.