ಕುಶಾಲನಗರ, ಜ. ೨೨: ಕುಶಾಲನಗರ ರಥಬೀದಿಯ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. ೨೯ ರಿಂದ ನಡೆಯಲಿದೆ.
ಫೆಬ್ರವರಿ ೨ ರವರೆಗೆ ೫ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ತಾ. ೨೯ ರಂದು ಬೆಳಿಗ್ಗೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಂತರ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ಸುಮಂಗಲಿಯರಿಗೆ ಮಡಲಕ್ಕಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯ ಬಳಿಯಿಂದ ೧೦೮ ಕಲಶ ಸಹಿತ ಹೊರೆ ಕಾಣಿಕೆಯನ್ನು ಮಂಗಳವಾದ್ಯದೊAದಿಗೆ ದೇವಾಲಯಕ್ಕೆ ತರಲಾಗುವುದು. ಸಂಜೆ ೭ ಗಂಟೆಗೆ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳ ನಂತರ ಮಂಗಳಾರತಿ ಜರುಗಲಿದೆ.
ಅಂದು ಸಂಜೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗದ ವೇದಿಕೆಯಲ್ಲಿ ಸ್ಯಾಕ್ಸೋ ಸತೀಶ್ ತಂಡದಿAದ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ವೇದಬ್ರಹ್ಮ ಯೋಗೇಶ್ ಭಟ್, ವೇದಬ್ರಹ್ಮ ಜೆ.ಆರ್. ಗಿರೀಶ್ ಭಟ್ ಮತ್ತು ವೇದಬ್ರಹ್ಮ ಲಕ್ಷಿö್ಮ ಪ್ರಸಾದ್ ಶಾಂತಿಯಾರ್ ಇವರುಗಳ ನೇತೃತ್ವದಲ್ಲಿ ನಡೆಯಲಿದೆ. ತಾ.೩೦ ರಂದು ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಂತರ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ ಸಂಜೆ ೫ ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ವಾಸ್ತು ಶಾಂತಿ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ೬ ಗಂಟೆಗೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗದ ವೇದಿಕೆಯಲ್ಲಿ ವಿದ್ವಾನ್ ಡಾ. ವಿದ್ಯಾಭೂಷಣ್ ಮತ್ತು ಕುಮಾರಿ ಮೇಧಾ ಭೂಷಣ್ ತಂಡದವರಿAದ ದಾಸವಾಣಿ ಸಾಂಸ್ಕೃತಿಕ ಕಾರ್ಯಕ್ರಮ, ಮರುದಿನ ತಾ. ೩೧ ರಂದು ಪೂಜಾ ಕಾರ್ಯಕ್ರಮಗಳು ಸಂಜೆ ೫:೩೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸರಿಗಮ ಸೀಸನ್ ೧೫ರ ದ್ವಿತೀಯ ಸ್ಥಾನ ವಿಜೇತೆ ವಿದುಷಿ ಕುಮಾರಿ ಸಾದ್ವಿನಿಕೊಪ್ಪ ಮತ್ತು ತಂಡದವರಿAದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ. ತಾ. ೩೧ ರಂದು ಸಂಜೆ ೬.೧೫ಕ್ಕೆ ಶ್ರೀ ವಾಸವಿ ಪೀಠಾಧಿಪತಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಫೆ. ೧ ರಂದು ಬೆಳಿಗ್ಗೆ ೬ ಗಂಟೆಯಿAದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಗೆ ಹೋಮ ಪಂಚಾಮೃತ, ಬ್ರಹ್ಮ ಕುಂಭಾಭಿಷೇಕ ನಂತರ ೧೦.೩೦ಕ್ಕೆ ಪೀಠಾಧಿಪತಿಗಳಿಂದ ಶಿಖರ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ವಾಸವಿ ಮಹಲ್ನಲ್ಲಿ ಅನ್ನಪೂರ್ಣೇಶ್ವರಿ ಪೂಜೆ ನಂತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿ ದೇವಾಲಯದ ಮುಂಭಾಗ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೪ ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕಾರಗೊAಡ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರ ಭವ್ಯ ಮೆರವಣಿಗೆ ನಗರದ ರಾಜ ಬೀದಿಗಳಲ್ಲಿ ನಡೆಯಲಿದೆ.
ಫೆ. ೨ ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ವಿಧಿವಿಧಾನಗಳು ಸಂಪನ್ನಗೊಳ್ಳಲಿದೆ. ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್, ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ತುಮಕೂರು ವಿವಿ ಉಪಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಆರ್ಯವೈಶ್ಯ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಆರ್.ಎಲ್. ಪ್ರಭಾಕರ್, ಆರ್.ಜಿ. ಶ್ರೀನಿವಾಸ್ ಮೂರ್ತಿ, ಕೆ.ವಿ. ಅಮರೇಶ್, ಉಮಾ ಸಾಯಿ ರಾಮ್, ಎಸ್. ಸುನಿಲ್, ಎ.ಆರ್. ರವಿಕುಮಾರ್, ಕೆ.ಜಿ. ಪಾರ್ಥಸಾರಥಿ ಮತ್ತು ಶಕ್ತಿ ದಿನಪತ್ರಿಕೆ ಸಂಪಾದಕರು ಮತ್ತು ಆಡಳಿತಾಧಿಕಾರಿ ಜಿ. ಚಿದ್ವಿಲಾಸ್ ಪಾಲ್ಗೊಳ್ಳುವರು ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.