ಮಡಿಕೇರಿ, ಜ. ೨೧: ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಾರಿಕೆ ದಿನೇಶ್ ಕುಮಾರ್ ಅವರು ಲೋಕಾಯುಕ್ತ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಈ ಕುರಿತು ಸರಕಾರ ಆದೇಶ ಹೊರಡಿಸಿದ್ದು, ಸ್ಥಳ ನಿಗದಿಗೊಂಡಿಲ್ಲ. ಮಡಿಕೇರಿ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದ ದಿನೇಶ್ ಅವರು ಬಳಿಕ ಮಂಗಳೂರು ಡಿಎಸ್‌ಪಿಯಾಗಿ, ಕೊಡಗು ಎಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.