ವೀರಾಜಪೇಟೆ, ಜ. ೨೨: ಯುವ ಜನಾಂಗ ಮೊಬೈಲ್ ಫೋನ್ಗಳನ್ನು ದೂರ ಮಾಡಿ ಸಾಧು - ಸಂತರು ನುಡಿದ ವಚನ, ಗಾಯನಗಳು ಮತ್ತು ದೇವರ ನಾಮಗಳಿಗೆ ಮಹತ್ವ ನೀಡುವಂತಾಗಬೇಕು ಎಂದು ಬಾಳೆಲೆ ಕಾವೇರಿ ಕಲಾ ಸಮಿತಿ ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ - ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೩೯ನೇ ಮಾಸಿಕ ತತ್ವಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ವಚನ, ಗಾಯನ ಮತ್ತು ದೇವರನಾಮ ಸ್ಮರಣೆ ಭಜನೆ ಮೂಲಕ ಸಮಿತಿಯ ಮಹಿಳಾ ಸದಸ್ಯರೊಂದಿಗೆ ಹಾಡಿದ ಬಳಿಕ ಮಾತನಾಡಿ, ಪುರಂದರ ದಾಸರ ಕೀರ್ತನೆ, ಸಾಹಿತ್ಯ ಸಂಸ್ಕೃತದಲ್ಲಿತ್ತು. ಸಾಮಾನ್ಯ ಜನರಿಗೆ ತಲುಪಲು ಕರ್ನಾಟಕ ಸಂಗೀತ ಸಾಹಿತ್ಯ ಬಹಳ ದೊಡ್ಡದು. ಮುಂದಿನ ದಿನದಲ್ಲಿ ಜನರಿಗೆ ತಲುಪುವಂತ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಬಾಳೆಲೆ ಕಾವೇರಿ ಕಲಾ ಸಮಿತಿ ೧೯೯೫ರಲ್ಲಿ ಪ್ರಾರಂಭಗೊAಡು ಕೊಡಗಿನ ಬಾಳೆಲೆ, ಪೊನ್ನಂಪೇಟೆ, ಗೋಣಿಕೊಪ್ಪಲುವಿನಲ್ಲಿ ಬಹಳಷ್ಟು ಕಾರ್ಯಕ್ರಮ ನಡೆಸಲಾಗಿದೆ ಎಂದ ಅವರು, ವಚನ, ಗಾಯನ ಮತ್ತು ದೇವರನಾಮ ಕೀರ್ತನೆ ಮೈಸೂರು ಮತ್ತು ಮಡಿಕೇರಿ ಅಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿರುವುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಎನ್.ಪಿ. ಕೇಶವ ಕಾಮತ್ ಮಾತನಾಡಿ, ಕಾವೇರಿ ಕಲಾ ಸಮಿತಿ ಬಾಳೆಲೆ ಅವರು ಸುಮಾರು ೨೫ ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಮತ್ತು ನಾಡು, ನುಡಿಗಳ ಉಳಿವಿಗಾಗಿ ಶಕ್ತಿಯಾಗಿ ಗುರಿಯನ್ನಿಟ್ಟುಕೊಂಡು ಜನರಿಗೆ ತಿಳಿಸುವ ನಿಟ್ಟಿನಲ್ಲಿ ೨೫೦ನೇ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನಿಯ. ವಚನ, ಗಾಯನ ಮತ್ತು ದೇವರನಾಮಗಳು ಹೆಚ್ಚು ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಅರಮೇರಿ ಕಳಂಚೇರಿ ಶ್ರೀ ಮಠದ ಫೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ಸಂಗೀತಕ್ಕೆ ಹೆಚ್ಚು ಮಹತ್ವದ ಶಕ್ತಿ ಇದ್ದು ತನ್ನದೇ ಆದ ಕರ್ನಾಟಕ ಸಂಗೀತ, ಮನ ಸಂತೋಷಕ್ಕಾಗಿ ದೇಶಕ್ಕೆ ನೀಡಿದ ಶ್ರೇಷ್ಠ ಸಂಗೀತ. ಭಾರತ ದೇಶದಲ್ಲಿ ಹೆಚ್ಚು ಸಾಧು - ಸಂತರು ಜನರಿಗೆ ಬದುಕಿನಲ್ಲಿ ಉತ್ತಮ ಗುಣಗಳನ್ನು ತುಂಬುವAತಾಗಿದೆ. ಬದುಕಿನ ಮಜಲುಗಳನ್ನು ಸಂತರು ಕೊಟ್ಟು ಹೋಗಿದ್ದಾರೆ. ಈ ಜಗತ್ತಿನಲ್ಲಿ ಮಾನವರಾಗಿ ಬದುಕಲು ನೆಲ, ಜಲ, ಎಲ್ಲವು ಒಂದೆ ಆತ್ಮಶುದ್ಧಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಸಾಧ್ಯ ಎಂದು ನುಡಿದರು.
ವಚನ ಗಾಯನ ಮತ್ತು ದೇವರನಾಮ ಕಾರ್ಯಕ್ರಮವನ್ನು ಬಾಳೆಲೆ ಕಾವೇರಿ ಕಲಾ ಸಮಿತಿಯ ೧೦ ಮಂದಿ ಸದಸ್ಯರುಗಳು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಹೆಚ್.ಕೆ. ವರ್ಷಿಣಿ, ಕೆ.ಬಿ. ಇಂಪನ, ಸೋನಾ ಕಾರ್ಯಕ್ರಮ ನಡೆಸಿಕೊಟ್ಟರು.