ವೀರಾಜಪೇಟೆ, ಜ. ೨೨: ಕೇರಳದ ಇರಿಟ್ಟಿ ಸಮೀಪದ ಉಳಿಕ್ಕಲ್‌ನ ವಾಯತ್ತೂರು ಕಾಲಿಯಾರ್ (ಕೊಡಗಿನ ಶ್ರೀ ಆದಿ ಬೈತೂರಪ್ಪ) ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನ ಪುಗ್ಗೆರ ಕುಟುಂಬದ ಎತ್ತು ಪೋರಾಟ ಹಾಗೂ ಅಕ್ಕಿ ಅಳೆಯುವ ಶಾಸ್ತç ನಡೆಯಿತು.

ಊಟು ಹಬ್ಬದ ಅಕ್ಕಿಯನ್ನು ಕೊಡಗಿನಿಂದ ದೇವಸ್ಥಾನಕ್ಕೆ ತರಲಾಯಿತು. ಕೊಡಗಿನ ಐತಿಹಾಸಿಕ ಪುಗ್ಗೇರ ಮನೆಯಿಂದ ಬೈತೂರುವಿಗೆ ಕಾಲಿಯಾರ್ ಊಟು ಉತ್ಸವಕ್ಕಾಗಿ ಅಕ್ಕಿ ತರಲಾಗುತ್ತದೆ. ದೇವಸ್ಥಾನದಲ್ಲಿ ಅಕ್ಕಿ ಹಾಗೂ ಎತ್ತುಗಳೊಂದಿಗೆ ಆಗಮಿಸಿದ ಕೊಡವರನ್ನು ಸಂಪ್ರದಾಯದAತೆ ಬರಮಾಡಿಕೊಳ್ಳಲಾಯಿತು. ಕೊಡಗಿನಿಂದ ತಂದ ಅಕ್ಕಿಯನ್ನು ಅಳೆದ ಬಳಿಕ ವಾಯತ್ತೂರು ಉತ್ಸವ ಆರಂಭವಾಯಿತು.

ಗುರುವಾರದAದು ಶ್ರೀ ಭೂತಬಲಿ, ವಿಶೇಷ ಪೂಜೆ, ನೈವೇದ್ಯ, ಪುಗ್ಗೆರ ಮನೆಯವರ ಪೂಜಾ ಕೈಂಕರ್ಯಗಳು, ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶುಕ್ರವಾರ ಬೆಳಿಗ್ಗೆ ಕೊಡಗಿನವರಿಂದ ಮೆರವಣಿಗೆ, ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು, (೯ ಊಟ್) ನಾಡಿನ ಎತ್ತು ಪೋರಾಟ, ಅಕ್ಕಿ ಅಳೆಯುವುದು, ರಾತ್ರಿ ೮.೩೦ ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, ೯ ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ತೆಂಗಿನಕಾಯಿ ಒಡೆಯುವುದು, ೨೪ (೧೦ ಊಟ್) ರಂದು ದೊಡ್ಡ ಹಬ್ಬ, ಅಪರಾಹ್ನ ೨.೩೦ ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ, ೨೫ (೧೧ಊಟ್) ರಂದು ಪೂರ್ವಾಹ್ನ ೯.೩೦ ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆರ್ಶೀವಾದ ಕಾರ್ಯಕ್ರಮ ನಡೆಯಲಿದೆ.

ದೇವಾಲಯಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿ ಬಳಿಕ ಮಾತನಾಡಿದ ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ ಅವರು, ದೇವಾಲಯಕ್ಕೆ ವರ್ಷಂಪ್ರತಿಯAತೆ ತಮ್ಮ ಹಿರಿಯರ ಕಾಲದಿಂದಲೂ ಪುಗ್ಗೆರ ಕುಟುಂಬದವರಿAದ ನಡೆಸಿಕೊಂಡು ಬರುತ್ತಿದ್ದ ಪದ್ದತಿಯಂತೆ ಎತ್ತ್ ಪೋರಾಟ, ಅಕ್ಕಿ ಅಳೆಯುವ ಶಾಸ್ತçವನ್ನು ಮಾಡಿದ್ದೇವೆ. ಇದೀಗ ನಮ್ಮ ಕೊಡಗಿನ ಹಬ್ಬ ಪ್ರಾರಂಭವಾಗಿದ್ದು ಇನ್ನೂ ಮೂರು ದಿನಗಳ ಕಾಲ ಇಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೆಯೇ ಕೊಡಗಿನ ಸಾಂಪ್ರಾದಾಯಿಕ ಆಚರಣೆಗೆ ಕಲಾವಿದರನ್ನು ಕರೆದುಕೊಂಡು ಬರಲು ಕ್ಷೇತ್ರದ ಶಾಸಕ ಪೊನ್ನಣ್ಣ ಅವರು ಸಹಕಾರ ನೀಡುವುದಾಗಿ ಭಾನುವಾರ ಬೈತೂರು ಹಬ್ಬಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಟ್ರಸ್ಟಿಗಳು, ಪುಗ್ಗೆರ ರಂಜಿ, ಪುಗ್ಗೇರ ನಂದ, ಶಿವಕುಮಾರ್, ಸ್ಥಳೀಯ ಹಾಗೂ ಕೊಡಗಿನ ಭಕ್ತಾಧಿಗಳು, ದೇವಾಲಯದ ಪ್ರದಾನ ಅರ್ಚಕರು, ಕೋಮರತಚ್ಚನ್ ಸೇರಿದಂತೆ ಇತರರು ಹಾಜರಿದ್ದರು.