ಸಿದ್ದಾಪುರ, ಜ. ೨೨: ಹಾಡಹಗಲೇ ಕಾರ್ಮಿಕನ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ಕಾರ್ಮಿಕ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಡಗ-ಬಾಣಂಗಾಲ ಗ್ರಾಮದಲ್ಲಿ ಗುರುವಾರ ನಡೆದಿದೆ. ಬಾಡಗ - ಬಾಣಂಗಾಲ ಗ್ರಾಮ ವ್ಯಾಪ್ತಿಯ ಮಠದ ನಿವಾಸಿ ದೇವರಾಜ್ (ಚಿಲ್ಲಿ-೬೦) ಎಂಬವರು ಗುರುವಾರ ಬೆಳಿಗ್ಗೆ ೯ ಗಂಟೆಗೆ ಮಠದಿಂದ ಸಮೀಪದ ನ್ಯಾಯಬೆಲೆ ಅಂಗಡಿಗೆ ಅಕ್ಕಿ ತರಲೆಂದು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು.

ಈ ಸಂದರ್ಭ ಮಾರ್ಗ ಮಧೆÀ್ಯದ ಕಾಫಿ ತೋಟದಿಂದ ಹಠಾತ್ತನೆ ಕಾಡಾನೆಯೊಂದು ದೇವರಾಜ್ ಮೇಲೆ ಧಾಳಿ ನಡೆಸಿದೆ. ಅಲ್ಲದೆ ಸೊಂಡಿಲಿನಿAದ ಗುದ್ದಿದೆ. ಈ ಸಂದರ್ಭ ದೇವರಾಜ್ ತೋಟದೊಳಗೆ ಕಾಫಿ ಗಿಡಗಳ ಮಧ್ಯದಲ್ಲಿ ಓಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಕಾಡಾನೆ ಗುದ್ದಿದ ಪರಿಣಾಮ ದೇವರಾಜ್ ಅವರ ಕಾಲಿಗೆ ಹಾಗೂ ಸೊಂಟಕ್ಕೆ ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ನಂತರ ಅವರು ಕಿರಿಚಿಕೊಂಡಾಗ ಅಲ್ಲಿಗೆ ತೆರಳಿದ ಸ್ಥಳೀಯರು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ದೇವರಾಜ್ ಅವರನ್ನು ವೀರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾಡಾನೆ ಧಾಳಿಗೆ ಮುಂದಾದಾಗ ಹೆದರಿ ಓಡುವ ಸಂದÀರ್ಭ ಕಾಲು ಜಾರಿ ಬಿದ್ದು ದೇವರಾಜ್ ಗಾಯಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತಿತಿಮತಿ ವಲಯ ಉಪಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಆಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಡಗ - ಬಾಣಂಗಾಲ ಗ್ರಾಮದಲ್ಲಿ ಇತ್ತೀಚೆಗೆ ಹುಲಿ ದಾಳಿ ನಡೆಸಿ ಹಸುಗಳನ್ನು ಕೊಂದುಹಾಕಿತ್ತು. ಇದೀಗ ಕಾಡಾನೆಗಳು ಮಾನವನ ಮೇಲೆ ಧಾಳಿ ನಡೆಸುತ್ತಿದ್ದು, ವನ್ಯಪ್ರಾಣಿಗಳ ಹಾವಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಲು ಆತಂಕ ನಿರ್ಮಾಣವಾಗಿದೆ.

- ವಾಸು