ಜನವರಿ ೨೩ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮ ದಿನ. ನಮ್ಮ ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ನೇತಾಜಿಯವರ ವ್ಯಕ್ತಿತ್ವ ಕಣ್ಮುಂದೆ ಕಾಣುವುದು. ಹೋರಾಟದಲ್ಲಿ ಅಸಂಖ್ಯಾತ ಜನರಿಗೆ ಅವರು ಸ್ಪೂರ್ತಿಯ ಸೆಲೆಯಾಗಿದ್ದರು. ಅವರಲ್ಲಿ ದೇಶಪ್ರೇಮ ಅಗಾಧವಾಗಿತ್ತು. ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟು ಯಾವುದೇ ತ್ಯಾಗಕ್ಕೂ ಅವರು ಸಿದ್ದರಾಗಿದ್ದರು.

ಎರಡು ಬಾರಿ ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಅಜಾದ್ ಹಿಂದ್ ಫೌಸಿನ ಮೂಲಕ ಭಾರತದ ಸ್ವಾತಂತ್ರö್ಯಕ್ಕಾಗಿ ಇವರು ಹೋರಾಡಿದರು. ಬ್ರಿಟನಿನಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ೪ನೇ ರ‍್ಯಾಂಕ್‌ನಲ್ಲಿ ಪಾಸು ಮಾಡಿದರೂ ಅದನ್ನು ತಿರಸ್ಕರಿಸಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿದರು.

ಅವರು ನೀವು ನನಗೆ ರಕ್ತ ದಾನ ಮಾಡಿ ನಾನು ನಿಮಗೆ ಸ್ವಾತಂತ್ರö್ಯ ಕೊಡುವೆನೆಂದು ಚಳುವಳಿಯ ಸಂದರ್ಭದಲ್ಲಿ ಕರೆ ನೀಡಿ, ಸಾವಿರಾರು ಯುವಕರಿಗೆ ಸ್ಪೂರ್ತಿ ತುಂಬಿ, ಪ್ರತಿಯೊಬ್ಬ ನಾಗರಿಕರಲ್ಲೂ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿ ಕೆಚ್ಚೆದೆಯ ದೇಶ ಪ್ರೇಮಿ ಎನಿಸಿದರು ಸುಭಾಷರು.

ನಮ್ಮ ದೇಶವನ್ನು ಬ್ರಿಟಷರಿಂದ ಮುಕ್ತಗೊಳಿಸಲು ಬಹಳ ಶ್ರಮಿಸಿದರು. ನೇತಾಜಿ ಬಂಗಾಳಿ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಹಲವಾರು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರೂ ಅವರಲ್ಲಿ ದೇಶ ಪ್ರೇಮ ಕಿಂಚಿತ್ತೂ ಕಡಿಮೆ ಆಗಲಿಲ್ಲ. ಇನ್ನೂ ಹೆಚ್ಚು ಹೋರಾಡುವಂತೆ ಮನಸ್ಸು ಪ್ರೇರೆಪಿಸಿತು. ಅವರಲ್ಲಿ ನೀತಿ ನಿಪುಣತೆ ಚಾಣಕ್ಯತನ ಸಾಮರ್ಥ್ಯವಿತ್ತು. ಉತ್ತರ ಬಂಗಾಳದಲ್ಲಿ ಪ್ರವಾಹ ಪೀಡಿತರಿಗಾಗಿ ಸ್ವಯಂ ಸೇವಕ ದಳ ಕಟ್ಟಿ ದುಡಿದರು. ಇವರ ಸೇವೆಯನ್ನು ಪರಿಗಣಿಸಿ ಕೊಲ್ಕತ್ತಾದ ಕಾರ್ಪೊರೇಷನ್‌ನಲ್ಲಿ ಅಧಿಕಾರ ನೀಡಿದಾಗ ಅದನ್ನು ಸ್ವೀಕರಿಸದೆ ತಾವು ಜನಸೇವೆಗೆ ಮುಂದಾದರು.

ಅವರ ಜೀವನ ಪೂರ್ತಿ ಜೈಲುವಾಸವೇ. ಅಲ್ಲಿ ಅವರ ಆರೋಗ್ಯ ಹದಗೆಟ್ಟಾಗ ಯುರೋಪ್‌ಗೆ ಹೋಗಿ ಹಿಟ್ಲರನ್ನು ಭೇಟಿ ಮಾಡಿ ಮುಂದಿನ ಕಾರ್ಯದ ಬಗ್ಗೆ ಅವರೊಡನೆ ಚರ್ಚಿಸಿ ೧೯೩೮ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಜನತೆ ನೇತಾಜಿಯವರನ್ನು ಚುನಾಯಿಸಿದರು. ಸುಭಾಷರ ಕ್ರಾಂತಿಕಾರಿ ಭಾವ ಗಾಂಧೀಜಿಗೆ ಸರಿ ಬಾರದ ಕಾರಣ ಅವರು ಅಧ್ಯಕ್ಷರಾಗುವುದನ್ನು ಒಪ್ಪಲಿಲ್ಲ. ಅವರು ರಾಷ್ಟಿçÃಯ ಸೇನೆಯನ್ನು ಸ್ಥಾಪಿಸಿ ಅವಿಭಾಜ್ಯ ಭಾರತದ ಪ್ರಥಮ ಪ್ರಧಾನಿ ಆದರು. ಅವರು ಕವಿ ಮತ್ತು ಭಾಷಣಕಾರರಾಗಿದ್ದರು.

ಆಜಾದ್ ಹಿಂದ್ ಸೈನ್ಯದ ಸೈನಿಕರು ಸುಭಾಷ್‌ರನ್ನು ನೇತಾಜಿ ಎಂದು ಗೌರವದಿಂದ ಕರೆದರು. ಹಿಂದೂ ಮತ್ತು ಮುಸ್ಲಿಂರ ಐಕ್ಯತೆಗಾಗಿ ಅವರು ಶ್ರಮಿಸಿದರು.

ಮಾತೃ ಭೂಮಿಗಾಗಿ ಹೋರಾಡಿದ ವೀರರನ್ನು ಅವರ ಜನ್ಮದಿನದಂದು ಸ್ಮರಿಸಿಕೊಳ್ಳುವುದು ದೇಶದ ಜನತೆಯ ಕರ್ತವ್ಯ. ಬ್ರಿಟಿಷರನ್ನು ಅಟ್ಟಹಾಸಗೈದ ವೀರ ಪರಾಕ್ರಮಿ ನೇತಾಜಿ. ಭಾರತೀಯರಿಗೆ ಇವರು ಸ್ಪೂರ್ತಿದಾಯಕ ಈ ವೀರ ಪುತ್ರನ ಜನ್ಮ ದಿನವನ್ನು ಎಲ್ಲರೂ ಆಚರಿಸುವಂತಾಗಲಿ.

-ಚೊಟ್ಟೆಯAಡಮಾಡ ಲಲಿತ ಕಾರ್ಯಪ್ಪ

ಟಿ. ಶೆಟ್ಟಿಗೇರಿ