ಮಡಿಕೇರಿ, ಜ. ೨೨: ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ "ಕೂರ್ಗ್ ಚಾಂಪಿಯನ್ ಶಿಪ್ ಕಪ್-೨೦೨೬" ಪಂದ್ಯಾವಳಿ ಸಮಾರೋಪಗೊಂಡಿತು.

ವಿಜೇತರ ವಿವರ

೧೬ ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಸುಂಟಿಕೊಪ್ಪದ ಸಂತ ಮೇರಿಸ್ ಶಾಲೆಯ ಅಹಲ್ಯ ಪ್ರಥಮ, ಪೊನ್ನಂಪೇಟೆಯ ಸರ್ವದೈವತ ಶಾಲೆಯ ಲಿಪಿಕಾ ದ್ವಿತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಅವಿನಾಶ್ ಪ್ರಥಮ, ಪೊನ್ನಂಪೇಟೆಯ ಸರ್ವದೈವತ ಶಾಲೆಯ ಲಿತೇಶ್ ದ್ವಿತೀಯ ಸ್ಥಾನ ಪಡೆದರು. ೨೧ ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಪೊನ್ನಂಪೇಟೆಯ ಸರ್ವದೈವತ ಶಾಲೆಯ ಲಿಪಿಕಾ ಪ್ರಥಮ, ಕೂಡಿಗೆಯ ಮೊರಾರ್ಜಿ ದೇಸಾಯಿ ಶಾಲೆಯ ಶೀತಲ್ ದ್ವಿತೀಯ ಸ್ಥಾನ ಪಡೆದರು.

೨೧ ವರ್ಷದೊಳಗಿನ ಬಾಲಕಿಯರ ಡಬಲ್ಸ್ನಲ್ಲಿ ಸುಂಟಿಕೊಪ್ಪದ ಸಂತಮೇರಿಸ್ ಶಾಲೆಯ ಅಹಲ್ಯ ಹಾಗೂ ನಿಮ್ರಾ ಪ್ರಥಮ, ಅನುಷ್ಕಾ ಹಾಗೂ ಪೊನ್ನಂಪೇಟೆಯ ಸರ್ವದೈವತ ಶಾಲೆಯ ಲಿಪಿಕಾ ದ್ವಿತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಸಿಂಗಲ್ಸ್ನಲ್ಲಿ ಪೊನ್ನಂಪೇಟೆಯ ಸರ್ವದೈವತ ಶಾಲೆಯ ಲಿತೇಶ್ ಪ್ರಥಮ, ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಐಜಾ಼ನ್ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ನಲ್ಲಿ ಕೊಡಗು ವಿದ್ಯಾಲಯದ ಅವನೀಶ್ ಹಾಗೂ ಐಜಾನ್ ಪ್ರಥಮ, ಲಿತೇಶ್ ಹಾಗೂ ನವೋದಯ ವಿದ್ಯಾಲಯದ ಸ್ಕಂದ ದ್ವಿತೀಯ ಸ್ಥಾನ ಪಡೆದರು.

೩೦ ವರ್ಷ ಮೇಲ್ಪಟ್ಟವರ ಪುರುಷರ ವಿಭಾಗ ಡಬಲ್ಸ್ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ ಹಾಗೂ ಡೇರಿಕ್ ಡಿಸೋಜ ಪ್ರಥಮ, ಪೊನ್ನಂಪೇಟೆಯ ಈಶ್ವರ್ ಹಾಗೂ ಲಿತೇಶ್ ದ್ವಿತೀಯ. ಪುರುಷರ ಸಿಂಗಲ್ಸ್ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ ಪ್ರಥಮ, ಪೊನ್ನಂಪೇಟೆಯ ಈಶ್ವರ್ ದ್ವಿತೀಯ ಬಹುಮಾನ ಪಡೆದರು.

ಮಿಕ್ಸಡ್ ಡಬಲ್ಸ್ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ, ಮಡಿಕೇರಿಯ ರೀತ್ ಗಣಪತಿ ಮೇಕತಂಡ ಪ್ರಥಮ, ಪೊನ್ನಪೇಟೆಯ ಈಶ್ವರ್ ಹಾಗೂ ಲಿಪಿಕಾ ದ್ವಿತೀಯ, ವೆಟರನ್ಸ್ನಲ್ಲಿ ಪ್ರವೀಣ್ ಶೇಟ್ ಪ್ರಥಮ ಹಾಗೂ ಮಹಮ್ಮದ್ ಅಸಿಫ್ ದ್ವಿತೀಯ ಸ್ಥಾನ ಬಹುಮಾನ ಗಳಿಸಿದರು.

ಮಹಿಳಾ ಸಿಂಗಲ್ಸ್ನಲ್ಲಿ ರೀತ್ ಗಣಪತಿ ಮೇಕತಂಡ ಪ್ರಥಮ ಹಾಗೂ ನಮಿತಾ ಪೂವಣ್ಣ ಬಾಚಮಂಡ ದ್ವಿತೀಯ, ಮಹಿಳಾ ಡಬಲ್ಸ್ ನಲ್ಲಿ ರೀತ್ ಗಣಪತಿ ಮೇಕತಂಡ ಹಾಗೂ ಕದನೂರಿನ ಸ್ವಾತಿ ತಂಗಮ್ಮ ಚೌರಿರ ಪ್ರಥಮ, ನಾಪೋಕ್ಲುವಿನ ನಮಿತಾ ಪೂವಣ್ಣ ಬಾಚಮಂಡ ಹಾಗೂ ನಾಪೋಕ್ಲುವಿನ ಪೂಜಾ ಕುಟ್ಟಪ್ಪ ಬಾಚಮಂಡ ದ್ವಿತೀಯ ಸ್ಥಾನ ಪಡೆದರು.

ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್‌ನ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಂಗಡ ಬಬಿನ್ ಬೋಪಣ್ಣ ಹಾಗೂ ಜೀಬ್ರ ರಾಕ್ಸ್ ಸಂಸ್ಥೆಯ ಮಾಲೀಕ ಎಂ. ಸುಬ್ರಮಣಿ ನಾಣಯ್ಯ ಅವರು ಬಹುಮಾನ ವಿತರಿಸಿದರು. ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ಟ್ರೋಫಿ, ಪದಕ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.