ಕೂಡಿಗೆ, ಜ. ೨೩: ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆಯ ಸೂಚನೆಯಂತೆ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ತಂಡವು ಈಗಾಗಲೇ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ ಸಿದ್ದಲಿಂಗಪುರ ಮುಖ್ಯ ರಸ್ತೆ ಮತ್ತು ಸೋಮವಾರಪೇಟೆ ಬಾಣವಾರ ಮತ್ತು ಆಲೂರು-ಸಿದ್ದಾಪುರ ರಸ್ತೆಯ ಅಂಚಿನಲ್ಲಿ ಬೆಂಕಿ ರೇಖೆ ಗುರುತಿಸಿದೆ. ಆ ಭಾಗದಲ್ಲಿ ಗಿಡಗಂಟಿಗಳನ್ನು ಕಡಿದು ಸುಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ವಹಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದಾರೆ.
ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶರವಣ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಈ ಕಾರ್ಯದಲ್ಲಿ ತೊಡಗಿದ್ದಾರೆ.