ಮಡಿಕೇರಿ, ಜ. ೨೩: ೨೦೨೫-೨೬ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಆಶೀರ್ವಾದ್ ಪೈಪ್ಸ್ ಪ್ರೆöÊವೇಟ್ ಲಿಮಿಟೆಡ್, ಬೆಂಗಳೂರು ರವರು ತರಬೇತಿಯನ್ನು ಪ್ಲಂಮಿAಗ್ ಸ್ಕೂಲ್, ಅತ್ತಿಬೆಲೆ ಬೆಂಗಳೂರು ಇಲ್ಲಿ ೨ ತಿಂಗಳು ೧೫ ದಿನಗಳು (೭೫ ದಿನಗಳು) ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌಧ ಮತ್ತು ಪಾರ್ಸಿ). ಅಭ್ಯರ್ಥಿಯ ವಯಸ್ಸು ಕನಿಷ್ಟ ೧೮ ರಿಂದ ಗರಿಷ್ಠ ೩೫ ವರ್ಷ ಮೀರಿರಬಾರದು (ಅರ್ಜಿ ಸಲ್ಲಿಸಲು ಅಂತಿಮ ದಿನಾಂಕದೊಳಗೆ) ವಿದ್ಯಾರ್ಹತೆ ೮ನೇ, ೧೦ನೇ ತರಗತಿ, ಐಟಿಐ, ಡಿಪ್ಲೋಮಾ, ಪಿಯುಸಿ ಮತ್ತು ಯಾವುದೇ ಪದವಿ (ಪಾಸ್/ಪೈಲ್).
ಹೆಚ್ಚಿನ ಮಾಹಿತಿಗೆ ತಾಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ ದೂರವಾಣಿ ಸಂಖ್ಯೆ ೮೫೪೮೦೬೮೫೧೯, ವೀರಾಜಪೇಟೆ ದೂ.ಸಂ. ೯೯೦೦೭೩೧೦೩೭ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕೊಡಗು ಜಿಲ್ಲೆ ೯೯೭೨೭೯೯೦೯೧ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ. ದಿವಾಕರ ತಿಳಿಸಿದ್ದಾರೆ.