ಮಡಿಕೇರಿ, ಜ. ೨೩: ಭಾರತದ ಸ್ವಾತಂತ್ರö್ಯಕ್ಕಾಗಿ ಯಾವ ರೀತಿ ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ದ ಹೋರಾಟ ನಡೆಸಿತ್ತೊ ಅದೇ ರೀತಿಯಲ್ಲಿ ಪ್ರಜಾಪ್ರಭುತ್ವ ದ ಉಳಿವಿಗಾಗಿ ಮತ್ತೊಂದು ಹೋರಾಟವನ್ನು ಬಿಜೆಪಿ ವಿರುದ್ದ ನಡೆಸಲು ಸಿದ್ದರಾಗಿ ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್.ಭೋಸರಾಜ್ ರವರು ಕರೆ ನೀಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಯೋಜನೆಯಾಗಿ ಬದಲಾಯಿಸಿದ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಮಾರ್ಗಸೂಚಿಯಂತೆ ನಡೆಯಲಿರುವ ಹೋರಾಟದ ಸಿದ್ದತೆ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೨೦೦೫ ರಲ್ಲಿ ಡಾ ಮನಮೋಹನ್ ಸಿಂಗ್ ರವರ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಪಂಚಾಯತ್ ವ್ಯವಸ್ಥೆ ಅತ್ಯಂತ ಬಲಿಷ್ಠ ವಾಗಿ ದೇಶದ ಪ್ರಗತಿಗೆ ಕಾರಣವಾಯಿತು. ಕಳೆದ ೨೦ ವರ್ಷಗಳಿಂದ ಈ ಯೋಜನೆಯಿಂದ ಪ್ರತಿ ಪಂಚಾಯತ್ ಗಳು ವಾರ್ಷಿಕ ಸರಾಸರಿ ೧ ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ನಡೆಸುತ್ತಾ ಬಂದಿದ್ದು ಕೂಲಿ ಕಾರ್ಮಿಕರುಮಹಿಳೆಯರು, ಬಡವರಿಗೆ ಉದ್ಯೋಗ ಕಲ್ಪಿಸಿದೆ.

ಇಂತಹ ಮಹತ್ವದ ಮತ್ತು ದೇಶದ ಪ್ರಗತಿಗೆ ಪೂರಕವಾದ ಯೋಜನೆಯನ್ನು ರದ್ದು ಮಾಡಿರುವುದು ಬಿಜೆಪಿ ಯವರ ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು. ಶೇಕಡಾ ೯೦:೧೦ ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮನರೇಗಾ ಯೋಜನೆಗೆ ಅನುದಾನ ಹಂಚಿಕೆ ಮಾಡಿದ್ದರೆ ಈಗ ಕೇಂದ್ರ ಸರ್ಕಾರ ಅದನ್ನು ೬೦:೪೦ ಕ್ಕೆ ಬದಲಾಯಿಸಿದೆ.

ಇದರಿಂದ ಎಲ್ಲಾ ರಾಜ್ಯಗಳು ಈ ಯೋಜನೆಯನ್ನು ಸ್ಥಗಿತಗೊಳಿಸಲಿದೆ. ಈ ಮೂಲಕ ಬಿಜೆಪಿ ತನ್ನ ಗಾಂಧಿ ವಿರೋಧಿ ನೀತಿಯನ್ನು ಜಾರಿ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವ ಬೋಸರಾಜ್ ಟೀಕಿಸಿದರು.

ಭಾರತದ ಸ್ವಾತಂತ್ರö್ಯ ಹೋರಾಟ, ನಂತರ ಕಾಂಗ್ರೆಸ್ ಪಕ್ಷ ದೇಶವನ್ನು ಪ್ರಗತಿಯ ಪಥದಲ್ಲಿ ಸಾಗಿಸಿದ್ದು, ಹಿಂದಿನ ಎಲ್ಲಾ ಐತಿಹಾಸಿಕ ಘಟನೆಗಳನ್ನು ಮರೆಮಾಚಿ ೨೦೧೪ರಿಂದಲೇ ಭಾರತದ ಇತಿಹಾಸ ಆರಂಭಗೊAಡಿದೆ ಎಂದು ಬಿಂಬಿಸಿ ಬಿಜೆಪಿಯವರು ದೇಶದ ಇತಿಹಾಸ ಬದಲಿಸಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ ೧೦೦ ದಿನಗಳ ಉದ್ಯೋಗ ಮತ್ತು ಗರಿಷ್ಠ ಹೆಚ್ಚಿನ ದಿನ ಉದ್ಯೋಗದ ಭರವಸೆ ಇತ್ತು. ಆದರೆ ವಿಜಿ ಜಿ ರಾಮ್ ಜಿ ಯೋಜನೆಯಲ್ಲಿ ೧೨೫ ದಿನ ಎಂದು ನಿಗದಿ ಪಡಿಸಿ ಅನ್ಯಾಯ ಮಾಡಲಾಗಿದೆ. ಪಂಚಾಯತ್‌ಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಇರುವ ಸ್ವಾಯತ್ತೆಗಳನ್ನು ಕಸಿದು ಕೇಂದ್ರ ಸರ್ಕಾರದ ವ್ಯಾಪಿಗೆ ಒಳಪಡಿಸಲಾಗಿದ್ದು ಇದು ಸಂವಿಧಾನ ಬಾಹಿರವಾದ ಪ್ರಕ್ರಿಯೆ ಆಗಿದೆ ಎಂದು ಹೇಳಿದರು. ಇದರ ಬಗ್ಗೆ ಜನಾಂದೋಲ ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ಪೊನ್ನಣ್ಣ ಕರೆ ನೀಡಿದರು.

ಕಾಂಗ್ರೆಸ್ ಸಿದ್ದಾಂತವನ್ನು ಅಳಿಸುವ ಉದ್ದೇಶದಿಂದ ಬಿಜೆಪಿ ಆರ್.ಎಸ್.ಎಸ್. ಸಿದ್ಧಾಂತವನ್ನು ಹೇರಲು ಹೊರಟಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಆರೋಪಿಸಿದರು.

ಮನರೆಗಾ ಸೇರಿದಂತೆ ಅನೇಕ ರೋಜಗಾರ್ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿದೆ. ಆದರೆ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜನರಿಂದ ಮರೆ ಮಾಚಲು ಬಿಜೆಪಿ ವಿಬಿ ಜಿ ರಾಮ್ ಜಿ ಯೋಜನೆಯಾಗಿ ಮಾರ್ಪಾಡು ಮಾಡಿದೆ.ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಮತ್ತು ಜನಜಾಗೃತಿ ಮೂಲಕ ಗ್ರಾಮ ಸ್ವರಾಜ್ ವ್ಯವಸ್ಥೆಗೆ ಆಗಿರುವ ಅನ್ಯಾಯವನ್ನು ತಡೆಗಟ್ಟಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪೂರ್ತಿಯಾಗಿ ದೇಶವನ್ನು ಹಾಳು ಮಾಡಲು ಬಿಜೆಪಿ ಹೊರಟಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಟೀಕಿಸಿದರು. ಜಗತ್ತಿನ ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದ ಪ್ರಗತಿಗಾಗಿ ೪೦ ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳಲ್ಲಿ ೨೦ ಯೋಜನೆಗಳನ್ನು ಬಿಜೆಪಿ ರದ್ದುಪಡಿಸಿ ದೇಶಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೆಪಿಸಿಸಿ ಮಾರ್ಗಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಹೋಬಳಿಮಟ್ಟದಲ್ಲಿ ಹೋರಾಟಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿA, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕೆ.ಬಿ.ಶಾಂತಪ್ಪ, ಡಿಸಿಸಿ ಉಪಾಧ್ಯಕ್ಷರಾದ ಕೆ.ಎಂ.ಲೋಕೇಶ್, ಸುಜು ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ಮುನೀರ್ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿ.ಪಿ. ಶಶಿಧರ್, ಹೆಚ್.ಎ.ಹಂಸ, ಇಸ್ಮಾಯಿಲ್. ಪಟ್ಟಡ ರಂಜಿ ಪೂಣಚ್ಚ, ಸತೀಶ್ ಕುಮಾರ್,ಮೀದೇರಿರ ನವೀನ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ, ಟಾಟು ಮೊಣ್ಣಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಕೆ.ಪಿ.ಸಿ.ಸಿ. ಪ್ರಮುಖರಾದ ನಟೇಶ್ ಗೌಡ, ಹೆಚ್.ಎಂ. ನಂದಕುಮಾರ್, ಬೇಕಲ್ ರಮಾನಾಥ್, ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಸಾಮಾಜಿಕ ಜಾಲತಾಣದ ವಿಭಾಗದ ಅಧ್ಯಕ್ಷ ಹೊಸೂರು ಸೂರಜ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಮಂಡಿರ ಸದಾ ಮುದ್ದಪ್ಪ, ಅಂಬೇಕಲ್ ಕುಶಾಲಪ್ಪ, ಕಾನೆಹಿತ್ಲು ಮೊಣ್ಣಪ್ಪ, ಜಿ.ಸಿ.ಜಗದೀಶ್, ಮುದ್ದುರಾಜ್, ಲಾರೆನ್ಸ್, ಶಾಫಿ ಯಡಪಾಲ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.