ಮಡಿಕೇರಿ, ಜ. ೨೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ (೫ನೇ ತರಗತಿಗೆ) ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಗೆ ೨೦೨೬-೨೭ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಮಡಿಕೇರಿ ತಾಲೂಕಿಗೆ ಸಂಬAಧಿಸಿದAತೆ ಫೆಬ್ರವರಿ ೫ ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಫೆಬ್ರವರಿ ೬ ರಂದು ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆ ಹಾಗೂ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿಗೆ ಫೆಬ್ರವರಿ ೭ ರಂದು ಪೊನ್ನಂಪೇಟೆ ತಾಲೂಕು ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳು ಫೆಬ್ರವರಿ ೫, ೬ ಮತ್ತು ೭ ರಂದು ಬೆಳಿಗ್ಗೆ ೯ ಗಂಟೆಯೊಳಗೆ ಇಲಾಖಾ ತರಬೇತುದಾರರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಹಾಬಲ ಅಥ್ಲೆಟಿಕ್ಸ್ ತರಬೇತುದಾರರು ದೂ.ಸಂ. ೯೯೮೦೮೮೭೪೯೯, ಬಿಂದ್ಯಾ ಹಾಕಿ ತರಬೇತುದಾರರು ೯೪೮೧೦೫೮೦೯೨ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ತಿಳಿಸಿದ್ದಾರೆ.