ಪ್ರಮುಖರಿಂದ ಮಾಹಿತಿ

ಕುಶಾಲನಗರ, ಜ ೨೪: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ ಜನವರಿ ೨೦೨೬ರ ಅವಧಿಗೆ ಪ್ರವೇಶಾತಿ ಆರಂಭಗೊAಡಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಇಗ್ನೋವ್ ಪ್ರಾದೇಶಿಕ ಉಪ ನಿರ್ದೇಶಕಿ ಡಾ.ಹೇಮಮಾಲಿನಿ ಹೆಚ್.ಸಿ. ತಿಳಿಸಿದ್ದಾರೆ.

ಬೈಲುಕೊಪ್ಪೆಯ ಲಾಮಾ ಕ್ಯಾಂಪ್‌ನ ಸೆರಾಜೆ ವಿಶೇಷ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, hಣಣಠಿs://igಟಿouಚಿಜmissioಟಿ.sಚಿmಚಿಡಿಣh.eಜu.iಟಿ ನಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಪ್ರವೇಶ ಪಡೆಯಬಹುದಾಗಿದೆ.

ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಿದೆ. ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಕಾಮರ್ಸ್ ಮತ್ತು ಬ್ಯಾಚುಲರ್ ಆಫ್ ಸೈನ್ಸ್ ಶಿಕ್ಷಣಕ್ಕೆ ವಾರ್ಷಿಕ ಆದಾಯ ರೂ. ೨.೫ ಲಕ್ಷಕ್ಕಿಂತ ಕಡಿಮೆ ಇರುವ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕದಲ್ಲಿ ಶೇ. ೫೦ ವಿನಾಯಿತಿಯನ್ನು ಪಡೆಯಬಹುದಾಗಿದೆ.

ಪ್ರವೇಶ ಪರೀಕ್ಷೆ ಇಲ್ಲದೆ ಎಂ.ಬಿ.ಎ ಗೆ ಇಗ್ನೊ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು. hಣಣಠಿs://igಟಿouಚಿಜmissioಟಿ.sಚಿmಚಿಡಿಣh.eಜu.iಟಿ/iಟಿಜex.ಠಿhಠಿ/siಣe/ಠಿಡಿogಡಿಚಿmmesನಲ್ಲಿ ಕಾರ್ಯಕ್ರಮಗಳ ಪಟ್ಟಿ ಮತ್ತು ಸಂಪೂರ್ಣ ವಿವರಗಳು ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ೨೦೧೮ ರಿಂದ ಆರಂಭಗೊAಡಿರುವ ಬೈಲುಕುಪ್ಪೆಯ ಸೆರಾ ಜೆ ವಿಶೇಷ ಅಧ್ಯಯನ ಕೇಂದ್ರ ೧೩೧೫೬, ಆ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆ ೯೯೦೦೪೮೦೨೯೦ ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ sರಿigಟಿouಛಿ@gmಚಿiಟ.ಛಿom ಗೆ ಮೇಲ್ ಸಹ ಮಾಡಬಹುದು ಎಂದು ಹೇಳಿದರು.

ಇಗ್ನೊ ಬೆಂಗಳೂರು ಪ್ರಾದೇಶಿಕ ಕೇಂದ್ರದ ವೆಬ್‌ಸೈಟ್‌ನಲ್ಲಿ ಅಧ್ಯಯನ ಕೇಂದ್ರಗಳ ವಿವರಗಳು ಲಭ್ಯವಿರುತ್ತದೆ (hಣಣಠಿs://ಡಿಛಿbಚಿಟಿgಚಿಟoಡಿe.igಟಿou.ಚಿಛಿ.iಟಿ).

ಕನಿಷ್ಟ ೧೮ ವಯೋಮಿತಿ, ಗರಿಷ್ಠ ವಯಸ್ಸಿನ ಮಿತಿಯಿಲ್ಲ. ಸುತ್ತಮುತ್ತಲಿನ ಗ್ರಾಮ, ನಗರಗಳ ಆಸಕ್ತರು ಅರ್ಜಿ ಸಲ್ಲಿಸುವ ಮೂಲಕ ದೂರ ಶಿಕ್ಷಣದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿನಂತಿಸಿಕೊAಡರು.

ಗೋಷ್ಠಿಯಲ್ಲಿ ಸೆರ ಜೆ ವಿಶೇಷ ಶಿಕ್ಷಣ ಕೇಂದ್ರದ ನಿರ್ದೇಶಕ ಗೆಶೆ ಜಂಪ ಚವಾಂಗ್, ವಿಶೇಷ ಶಿಕ್ಷಣ ಕೇಂದ್ರದ ಸಹಾಯಕ ಸಂಚಾಲಕ ನವಾಂಗ್ ಫುಂಟ್ಸೋಕ್, ಅಧ್ಯಯನ ಕೇಂದ್ರದ ಕಾರ್ಯದರ್ಶಿ ಕರ್ಮ ದೋರ್ಜಿ ಇದ್ದರು.