ಪ್ರತಿಯೊಬ್ಬ ಪ್ರಜೆಗೂ ದೇಶದ ಹಾಗುಹೋಗುಗಳ ಬಗ್ಗೆ ಕುತೂಹಲವಿದೆ. ನಿತ್ಯ ನಡೆಯುವ ರಾಜಕೀಯದ ವರ್ತಮಾನವನ್ನು ವೀಕ್ಷಿಸುತ್ತಾ ನಿಯತಕಾಲಿಕೆಗಳನ್ನು ಓದುತ್ತಾ ಮಾಹಿತಿ ಸಂಗ್ರಹಿಸುತ್ತಾನೆ. ದೇಶದ ಕಟ್ಟ ಕಡೆಯ ವ್ಯಕ್ತಿ ಅನಕ್ಷರಸ್ಥ ಕೂಡ ರಾಜಕೀಯದ ಹಿನ್ನೆಲೆಯನ್ನು ಪರಿಶೀಲಿಸುತ್ತಾನೆ. ತಾನು ಮತದಾನ ಮಾಡಿದ ವ್ಯಕ್ತಿಯ ಕುರಿತು ಆಲೋಚಿಸುತ್ತಾನೆ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದAದಿನಿAದ ಪ್ರಜೆಗಳ ಮತದಾನದಿಂದಲೇ ನಾಯಕನ ಆಯ್ಕೆ ನಡೆಯುತ್ತಿದೆ. ನಾಯಕನ ಆಯ್ಕೆಗಾಗಿ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು. ಮತದಾನದ ಹೆಸರೇ ಸೂಚಿಸುವಂತೆ "ಮತ"ವನ್ನು ನಾವು ಗುಪ್ತವಾಗಿ "ದಾನ" ನೀಡುವುದು. ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಇದೆ.
ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಜನವರಿ ೨೫ ರಂದು ರಾಷ್ಟಿçÃಯ "ಮತದಾರರ ದಿನ"ವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಎಲ್ಲಾ ವಯಸ್ಕರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅವರಿಗೆ ಅವರ ಮತದಾನದ ಬಗ್ಗೆ ಅರಿವು ಮೂಡಿಸುವುದು. ಭಾರತದ ಎಲ್ಲಾ ನಾಗರಿಕರಿಗೆ ರಾಷ್ಟçದ ಅಭಿವೃದ್ಧಿ, ಏಳಿಗೆ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವುದು. ಹಾಗೆಯೇ ಭಾರತದ ಚುನಾವಣಾ ಆಯೋಗದ ಸ್ಥಾಪನೆಯನ್ನು ಗುರುತಿಸಲು ದೇಶಾದ್ಯಂತ ಮೊದಲ ರಾಷ್ಟಿçÃಯ ಮತದಾರರ ದಿನವನ್ನು ೨೦೧೧ ರಲ್ಲಿ ಆಚರಿಸಲಾಯಿತು. ಮತದಾನ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಯುವಕರು ಸಕ್ರಿಯವಾಗಿ ಭಾಗವಹಿಸುವುದನ್ನು ಪ್ರೋತ್ಸಾಯಿಸಲು ರಾಷ್ಟಿçÃಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ರಾಷ್ಟಿçÃಯ ಮತದಾರರ ದಿನದ ಬಗ್ಗೆ ಜಾಗೃತಿ ಮೂಡಿಸುವುದು, ಮಾಹಿತಿಯನ್ನು ನೀಡುವುದು, ಪ್ರಜಾಪ್ರಭುತ್ವದ ಬಗ್ಗೆ ಜವಾಬ್ದಾರಿ ಬೆಳೆಸುವ ಗುರಿಯನ್ನು ಹೊಂದಿದೆ.
ದೇಶದ ಅಭಿವೃದ್ಧಿಯಲ್ಲಿ ಬದಲಾವಣೆಯನ್ನು ತರುವ ಶಕ್ತಿ ಪ್ರತಿಯೊಬ್ಬ ಅರ್ಹ ಮತದಾರರ ಕೈಯಲ್ಲಿದೆ ಎಂಬುದನ್ನು ಇದು ನೆನಪಿಸುತ್ತದೆ. ವಿಶೇಷವಾಗಿ ಹೊಸ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವುದು.
ದೇಶದ ನಾಗರಿಕರಿಗೆ ಅವರಿಗಿರುವ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಯಾವುದೇ ಆಮಿಷಕ್ಕೆ ಒಳಗಾಗದೆ ದೇಶದ ಅಬಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುವುದು. ಪ್ರತಿ ವರ್ಷ ಒಂದು ನಿರ್ದಿಷ್ಟ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಭಾರತವು ಪ್ರಜಾಪ್ರಭುತ್ವ ರಾಷ್ಟç. ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಮೂಲಭೂತ ಹಕ್ಕಿದೆ. ರಾಷ್ಟçವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆ ತರಲು ಸಮರ್ಥರೆಂದು ಭಾವಿಸುವ ಅಭ್ಯರ್ಥಿ ಯಾರನ್ನಾದರೂ ತನ್ನ ನಾಯಕನನ್ನಾಗಿ ಆಯ್ಕೆ ಮಾಡುವ ಹಕ್ಕು ಇದೆ. ಏಕೆಂದರೆ ದೇಶದ ಭವಿಷ್ಯವು ನಾವು ಆಯ್ಕೆ ಮಾಡುವ ನಾಯಕನ ಕೈಯ್ಯಲ್ಲಿದೆ.
ನಾವು ಮುಂದೆ ನಿಂತು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ದೇಶದ ಜನ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಿವಿಧ ಮೂಲಭೂತ ಯೋಜನೆಗಳನ್ನು ನಿರ್ಧರಿಸುವವರು ದೇಶದ ನಾಯಕ. ಮೂಲಭೂತ ವ್ಯವಸ್ಥೆಯನ್ನು ಸರಿಯಾಗಿ ಅಭಿವೃದ್ಧಿಪಡಿಸಬೇಕು. ಅದು ರಸ್ತೆಗಳ ನಿರ್ಮಾಣ, ವಿದ್ಯುತ್ ಸಂಪರ್ಕ, ರೈತ, ಸೈನಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಮುಂಬರುವ ಪೀಳಿಗೆಗೆ ಬಲಿಷ್ಠ ರಾಷ್ಟç ನಿರ್ಮಿಸಲು ನಾವು ಯುವಕರನ್ನು ಮತ ಚಲಾಯಿಸುವಂತೆ ಪ್ರೋತ್ಸಾಹಿಸಬೇಕು. ಮತದಾನ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜೊತೆಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಅರ್ಹ ಪ್ರತಿನಿಧಿಯನ್ನು ಆರಿಸುವುದು ಕೂಡಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಚುನಾವಣೆಯ ದಿನ ವಿದ್ಯಾವಂತರ ಮನಸ್ಥಿತಿ ಹೇಗಿರುತ್ತದೆಂದರೆ... ಏಕೆ ಸಮಯ ವ್ಯರ್ಥ ಮಾಡೋದು, ಅರಾಮವಾಗಿ ಮನೆಯಲ್ಲಿರೋಣ, ಪ್ರವಾಸ, ಪಿಕ್ನಿಕ್ ಹೋಗೋಣ, ಗೆಳೆಯರ ಮನೆ, ಕ್ರಿಕೆಟ್ ಆಡೋಣ ಎಂಬ ಬೇಜವಾಬ್ದಾರಿಯಿಂದ ವೋಟ್ ಮಾಡಲು ಹೋಗುವುದಿಲ್ಲ.
ಈ ನಿಟ್ಟಿನಲ್ಲಿ ಮತದಾರನ್ನು ಸೆಳೆಯಲು, ಭಾಗವಹಿಸುವ ಬಗ್ಗೆ ತಿಳಿಹೇಳಲು ಜೊತೆಗೆ ಈ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಆಚರಿಸಲಾಗುತ್ತದೆ.
ಮತದಾನ ಒಂದು ಪ್ರಬಲವಾದ ಶಕ್ತಿ. ಇದುವರೆಗೆ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳದವರನ್ನು ಪ್ರೋತ್ಸಾಹಿಸೋಣ. ಅನಕ್ಷರಸ್ಥರಿಗೆ ಮತದಾನದ ಕುರಿತು ಅರಿವು, ಜಾಗೃತಿ, ಮಾಹಿತಿ ನೀಡೋಣ.
ಚುನಾವಣೆಯ ಸಂದರ್ಭದಲ್ಲಿ ಜನ ಸರದಿ ಸಾಲಿನಲ್ಲಿ ನಿಲ್ಲಲು ವಿದ್ಯಾವಂತರೇ ಹೆಚ್ಚು ಹಿಂದೇಟು ಹಾಕುತ್ತಾರೆ. "ಸೂಳ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂಬ ‘ಪಂಪ'ನ ಮಾತಿನಂತೆ ಸರದಿಯಲ್ಲಿ ನಿಂತವರು ಮೊದಲಿಗರಾಗಿಯೇ ಆಗುತ್ತೇವೆ. ಮತ ಅತ್ಯಮೂಲ್ಯ, ದಾನ ಹಕ್ಕು ಮಾತ್ರವಲ್ಲ ನಮ್ಮ ಕರ್ತವ್ಯ ಕೂಡ. ಆದರಿಂದು ಮತ ದಾನವಾಗಿ ಉಳಿದಿಲ್ಲ ಮಾರಾಟವಾಗುತ್ತಿದೆ.
ಯಾವುದೋ ಒಂದು ಚಾನಲ್ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ತಲೆಕೆಡಿಸಿಕೊಂಡು ಕೂರುವ, ಹರಕೆ ಹೊರುವ, ನಾವು ಇಡೀ ದೇಶವನ್ನು ಆಳ್ವಿಕೆ ಮಾಡುವ ಚುನಾವಣೆ ಬಂದಾಗ ಮತದಾನದ ಬಗ್ಗೆ ಜಾಣಮೌನ ವಹಿಸುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ರಿಯಾಲಿಟಿ ಶೋನ ಬಗ್ಗೆ ವಹಿಸುವ ಕಾಳಜಿಯನ್ನು ಚುನಾವಣೆಯ ಸಂದರ್ಭದಲ್ಲಿ ವಹಿಸಿ ಮತದಾನ ಮಾಡಿ ಪ್ರಜಾ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಉಳಿಸಿಕೊಳ್ಳೋಣ.
ಕೊನೆಹನಿ: ಪ್ರಚಾರ ಜಾತ್ರೆ, ಗುಪ್ತ ಮತದಾನ ವೈಭವದ ಹಬ್ಬ.
- ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕರು, ಕಾವೇರಿ ಕಾಲೇಜು, ಗೋಣಿಕೊಪ್ಪಲು.