ಮಡಿಕೇರಿ, ಜ. ೨೪: ಅದು ಸಾವಿರದ ಒಂಭೈನೂರನೆಯ ಇಸವಿ. ಮರೆನಾಡು ಎಂಬ ಪ್ರದೇಶ ಆ ಸಂದರ್ಭದಲ್ಲಿ ಹೇಗಿದ್ದಿರಬಹುದೆಂದು ಊಹಿಸಿ ನೋಡಿ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ೮೦ ಕಿ.ಮೀ. ದೂರದಲ್ಲಿರುವ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳನ್ನು ಒಳಗೊಂಡ ಪ್ರದೇಶ ಈ ಮರೆನಾಡು.

ಆ ಸಂದರ್ಭದಲ್ಲಿ ಇಲ್ಲಿಗೆ ಬೀಳುತ್ತಿದ್ದ ಮಳೆಯ ಪ್ರಮಾಣ ಎಷ್ಟಿತ್ತೆಂದರೆ ೩೫೦ ರಿಂದ ೪೦೦ ಇಂಚುಗಳಷ್ಟು... ದುರ್ಗಮವಾದ ಪ್ರದೇಶ ರಸ್ತೆ - ಸೇತುವೆ, ವಾಹನಗಳು ಇಲ್ಲದಿದ್ದ ಕಾಲವದು. ಈ ಸಂದರ್ಭದಲ್ಲೇ ಶೀಕ್ಷಣಕ್ಕೆ ಒತ್ತು ನೀಡಿರುವುದು ಈ ಭಾಗದ ವಿಶೇಷತೆಯಾಗಿದೆ.

ಮರೆನಾಡಿನ ಬಾಡಗರಕೇರಿ ಗ್ರಾಮದಲ್ಲಿ ೧೯೦೦ನೇ ಇಸವಿಯಲ್ಲೇ ಪೂರ್ವಿಕರ ಪರಿಕಲ್ಪನೆಯಂತೆ, ಶಾಲೆಯನ್ನು ಪ್ರಾರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸಲು ಉದಾರವಾಗಿ ಎರಡು ಎಕರೆಯಷ್ಟು ಜಾಗವನ್ನು ನೀಡಿದ್ದು, ಅಲ್ಲಿನ ಮಲ್ಲೇಂಗಡ ಕುಟುಂಬಸ್ಥರು. ಅಂದು ಪ್ರಾರಂಭಗೊAಡ ಬಾಡಗರಕೇರಿ ಶಾಲೆ ನಂತರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದು, ಇದೀಗ ಯಶಸ್ವಿ ೧೨೫ ವರ್ಷಗಳನ್ನು ಪೊರೈಸಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆ ಯೊಂದಿಗೆ ಜೀವನ ರೂಪಿಸಿಕೊಂಡಿದ್ದಾರೆ. ೧೨೫ನೆಯ ವರ್ಷದ ಸಂಭ್ರಮವನ್ನು ಈ ಬಾರಿ ನಾಡಿನ ವಿದ್ಯಾಭಿಮಾನಿಗಳು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಶಿಕ್ಷಕರು, ಗ್ರಾಮಸ್ಥರ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿದ್ದು, ೪ಏಳನೇ ಪುಟಕ್ಕೆ

ಮೊದಲ ಪುಟದಿಂದ) ಗಣರಾಜ್ಯೋತ್ಸವ ದಿನವಾದ ತಾ. ೨೬ ರಂದು (ನಾಳೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರ ಹೆಚ್ಚಿನದ್ದಾಗಿದ್ದು, ೧೨೫ ವರ್ಷದ ನೆನಪಿನ ಅಂಗವಾಗಿ ದಾನಿಗಳ ಸಹಕಾರದೊಂದಿಗೆ ಸುಮಾರು ರೂ. ೩ ಲಕ್ಷ ವೆಚ್ಚದ ಆಟದ ಮೈದಾನವೊಂದನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯೂ ಈ ಸಂದರ್ಭ ನಡೆಯಲಿದೆ.

ತಾ. ೨೬ರ ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ೧೦.೩೦ಕ್ಕೆ ಶಾಲೆಯ ಹೊಸ ಆಟದ ಮೈದಾನದ ಉದ್ಘಾಟನೆ ನಡೆಯಲಿದ್ದು, ಸಾರ್ವಜನಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಅಪರಾಹ್ನ ೨ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ೭ ಗಂಟೆಗೆ ಮೈಸೂರಿನ ಜೀವನ್ ಮೆಲೋಡಿಸ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಂಘ ಇದನ್ನು ಪ್ರಾಯೋಜಿಸುತ್ತಿದೆ.

ಮಾಜಿ ಯೋಧರಿಗೆ - ಹಿರಿಯರಿಗೆ ಸನ್ಮಾನ

ಈ ಕಾರ್ಯಕ್ರಮದ ಸಂದರ್ಭ ವಿಶೇಷತೆಯಾಗಿ ಗ್ರಾಮ ವ್ಯಾಪ್ತಿಯ ಮಾಜಿ ಯೋಧರು, ವಿಧವಾ ಪತ್ನಿಯರು, ೯೦ ವರ್ಷ ಮೇಲ್ಪಟ್ಟ ಗ್ರಾಮದ ಹಿರಿಯರು, ಜತೆಗೆ ಇದೇ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿ ನಂತರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಕೇವಲ ನಾಡಿನವರ ಸಹಕಾರ ಪಾಲ್ಗೊಳ್ಳುವಿಕೆ ಮೂಲಕವೇ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. - ಶಶಿ ಸೋಮಯ್ಯ