ಮಡಿಕೇರಿ, ಜ. ೨೫: ಅಂತರರಾಷ್ಟಿçÃಯ ಹಾಕಿ ಆಟಗಾರ, ಒಲಂಪಿಯನ್ ಚೇಂದAಡ ನಿಕಿನ್ ತಿಮ್ಮಯ್ಯ ಅವರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ತಮ್ಮ ಆಟದ ಶೈಲಿಯ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿರುವ ಚೇಂದAಡ ಅಯ್ಯಣ್ಣ ಹಾಗೂ ರಾಣಿ ದಂಪತಿಯ ಪುತ್ರ ನಿಕಿನ್ ವಿವಾಹ ಸಮಾರಂಭ ತಾ. ೨೫ ರಂದು ಬಾಳುಗೋಡು ಕೊಡವ ಸಾಂಸ್ಕೃತಿಕ ಕೇಂದ್ರದಲ್ಲಿ ಮನೆಯಪಂಡ ಲಿಖಿತಾ ದೇಚಮ್ಮ ಅವರೊಂದಿಗೆ ನೆರವೇರಿತು.

ಸಮಾರಂಭದಲ್ಲಿ ಕೊಡಗು ಸೇರಿದಂತೆ ರಾಜ್ಯದ ಖ್ಯಾತನಾಮ ಹಾಕಿ ಆಟಗಾರರು, ಒಲಂಪಿಯನ್‌ಗಳು ಪಾಲ್ಗೊಂಡಿದ್ದರು.